ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ವಿಭಾಗ ತೆರೆಯುವಂತೆ ಶಾಸಕ ರಘುಪತಿ ಭಟ್ ಒತ್ತಾಯ

ಉಡುಪಿ: ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ವಿಭಾಗವೊಂದನ್ನು ತೆರೆದು, ಸರ್ಕಾರಿ ವೈದ್ಯಾಧಿಕಾರಿಗಳನ್ನು ಮಾಡಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಆಗ್ರಹಿಸಿದ್ದಾರೆ. ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ವಿಭಾಗವೊಂದನ್ನು ತೆರೆದರೆ, ಜನರಲ್ಲಿ ಇದು ಸರ್ಕಾರಿ ಆಸ್ಪತ್ರೆ ಎಂಬ ಭಾವನೆ ಬರುತ್ತದೆ. ಅಲ್ಲದೆ ಸರ್ಕಾರದಿಂದಲೂ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ […]

ಸೈಂಟ್ ಮೇರಿಸ್ ದ್ವೀಪಕ್ಕೆ ಬೋಟ್ ವ್ಯವಸ್ಥೆ ಹೊಸದಾಗಿ ಟೆಂಡರ್: ಜಿಲ್ಲಾಧಿಕಾರಿ

ಉಡುಪಿ, ಜುಲೈ 8: ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ಮಲ್ಪೆ ಬೀಚ್‍ನಿಂದ ಮತ್ತು ಜೆಟ್ಟಿಯಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬೋಟ್‍ಗಳಿಗೆ ನೀಡಿರುವ ಪರವಾನಗಿ ಅವಧಿಯು ಮುಗಿದಿರುವುದರಿಂದ, ಹೊಸದಾಗಿ ಟೆಂಡರ್ ಕರೆಯುವಂತೆ, ಮಲ್ಪೆ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು, ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಲು, ಬೀಚ್‍ನಿಂದ 4 ಬೋಟ್‍ಗಳು ಮತ್ತು ಜೆಟ್ಟಯಿಂದ 3 ಬೋಟ್‍ಗಳಿಗೆ ಈಗಾಗಲೇ ಅನುಮತಿ […]

ಆಯುಷ್ಮಾನ್ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಗೆ ವಿಲೀನ, ಬಡವರಿಗೆ ತೊಂದರೆ: ರಘಪತಿ ಭಟ್

ಉಡುಪಿ: ಕೇಂದ್ರ ಸರಕಾರದ‌ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ರೋಗಿ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ರಾಜ್ಯ ಸರಕಾರ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಳಿಸಿ, ಬಡವರನ್ನು ವೈದ್ಯಕೀಯ ಸೇವೆ ವಂಚಿತರನ್ನಾಗಿ ಮಾಡಿದೆ. ಇದರಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಯೋಜನೆ ಪ್ರತ್ಯೇಕವಾಗಿಸುವ ಜತೆಗೆ ಜಿಲ್ಲಾಸ್ಪತ್ರೆಗಳ ಶಿಫಾರಸ್ಸು ಪತ್ರ ಪಡೆಯುವ ಪದ್ಧತಿ ಕೈಬಿಡಲು ಮಳೆಗಾಲದ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು. ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ […]

ಉಡುಪಿ: ನೀರಿಗಾಗಿ ಬಜೆ ಡ್ಯಾಂನಲ್ಲಿ ಶ್ರಮದಾನ; ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನೀರಿನ ‌ಸಮಸ್ಯೆ

ಉಡುಪಿ: ಹಿರಿಯಡ್ಕ ಸಮೀಪದ ಬಜೆ ಡ್ಯಾಂ ನಲ್ಲಿ ನೀರಿನ ಹರಿವು ಹೆಚ್ಚಿಸಲು ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ನಾಗರಿಕರಿಂದ ಶ್ರಮದಾನ ಮೇ. 9ರಂದು ನಡೆಯಿತು. ಬಜೆ ಡ್ಯಾಂ ನಲ್ಲಿ ನೀರು ಇದ್ದರೂ ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇರುವ ನೀರನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಮಸ್ಯೆ ಎದುರಾಗಿತ್ತು. ಹೀಗಾಗಿ ಶಾಸಕರ ಸೂಚನೆಯಂತೆ ಹಲವು‌ ನಾಗರಿಕರು ಕೂಡ ಶ್ರಮದಾನದಲ್ಲಿ ಭಾಗವಹಿಸಿದ್ದಾರೆ. ಈ‌ ಬಗ್ಗೆ ಪ್ರತಿಕ್ರಿಯಸಿದ ಶಾಸಕ ರಘುಪತಿ ಭಟ್, […]

ಶಾಸಕರಾದ ರಘುಪತಿ ಭಟ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಚೌಕಿದಾರ್ ಸೈಕ್ಲೋತಾನ್ ಸೈಕಲ್ ಜಾಥಾ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಡುವ ಸಲುಚಾಗಿ ಇಂದು ಉಡುಪಿಯಲ್ಲಿ ಶಾಸಕರಾದ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ಬಿಜೆಪಿ ಯುವಮೋರ್ಚಾ ವತಿಯಿಂದ “ಚೌಕಿದಾರ್ ಸೈಕ್ಲೋತಾನ್ ಸೈಕಲ್ ಜಾಥಾ”ವು ಯಶಸ್ವಿಯಾಗಿ ನಡೆಯಿತು. ಉಡುಪಿ ಮಲ್ಪೆಯಿಂದ ಆರಂಭಗೊಂಡು ತಾಲೂಕು ಕಚೇರಿಯಿಂದ ಬ್ರಹ್ಮಗಿರಿ- ಅಜ್ಜರಕಾಡು ಮೂಲಕ ಸಾಗಿ ಜಿಲ್ಲಾ ಬಿಜೆಪಿ ಕಚೇರಿ ಬಳಿ ಸಮಾಪಣಗೊಂಡಿತು. ಕಾರ್ಯಕ್ರಮದಲ್ಲಿ ಶಾಸಕರ ಜೊತೆಗೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಸುವರ್ಣ ಕೂಡ ಜೊತೆಗಿದ್ದರು ಮತ್ತು ಬಿಜೆಪಿ ಯುವಮೋರ್ಚಾ […]