ಮರ ತೆರವು ವಿಚಾರ: ಅರಣ್ಯಾಧಿಕಾರಿ- ಶಾಸಕರ ಮಧ್ಯೆ ಮಾತಿನ ಚಕಮಕಿ, ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಬಿಜೆಪಿ ಟಾರ್ಗೆಟ್?

ಉಡುಪಿ: ಬ್ರಹ್ಮಾವರ ವ್ಯಾಪ್ತಿಯ ಕುಂಜಾರು ರಸ್ತೆ ಅಗಲೀಕರಣ ಮತ್ತು ಮರ ತೆರವು ವಿಚಾರಕ್ಕೆ ಸಂಬಂಧಿಸಿ ಶಾಸಕರು ಮತ್ತು ಅರಣ್ಯಾಧಿಕಾರಿ ನಡುವೆ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಅರಣ್ಯ ಇಲಾಖೆಯ ಮರ ತೆರವು ಮಾಡುವ ವಿಚಾರ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಮತ್ತು ಶಾಸಕ ರಘುಪತಿ ಭಟ್ ನಡುವೆ ವಾಕ್ಸಾಮರಕ್ಕೆ ಕಾರಣ ವಾಯಿತು. ಸಭೆಯಲ್ಲಿ ಅಗೌರವ ತೋರಿದ್ದಾರೆ ಎಂದು ಶಾಸಕ ರಘುಪತಿ ಭಟ್ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದರು. ನಾನು ಅಗೌರವ […]