ಕಣ್ಣು ಬಿಟ್ಟು ನೋಡಿ, ನಿಮಗೂ ನನ್ನಂತೆಯೇ ಖುಷಿ ಸಿಗಬಹುದು !

ಕೋರೋನ ಲೊಕ್ಡೌನ್ ಸಮಯದಲ್ಲಿ ಒಂದು ದಿನ ಎಂದಿನಂತೆ ಬೈಗು ಹೊತ್ತಲ್ಲಿ ಟೆರೇಸ್ ನಲ್ಲಿ ಅಡ್ಡಾಡುತ್ತಾ ಸುತ್ತಲಿನ ವಿಹಂಗಮ ದೃಶ್ಯ ಸುಮ್ಮನೆ ವೀಕ್ಷಿಸುತ್ತಿದ್ದಾಗ ಹಲವಾರು ಅನಿಸಿಕೆಗಳು ಮನದಲ್ಲಿ ಸುಳಿದವು. ಪ್ರಪಂಚವೆಲ್ಲ ವ್ಯಾಪಿಸಿದ ಕೊರೊನದಿಂದ ಮನುಕುಲವು ಅಸಹಾಯಕವಾದರೂ, ತನ್ನ ಉಳಿವಿಗಾಗಿ ಹೋರಾಟ ಮಾಡುತ್ತಲೇ ಆತ್ಮಾವಲೋಕನ ಮಾಡುತ್ತಿದೆ ಅನಿಸಿತು. ಈ ಹಿಂದೆಯೂ ಮನುಕುಲದ ಮೇಲೆ ಎಷ್ಟೊಂದು ಮಾರಕ ರೋಗಗಳ ಧಾಳಿ ನಡೆದಿಲ್ಲ?. ಆದರೆ ಅವೆಲ್ಲವನ್ನು ಗೆದ್ದು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆಯಲ್ಲವೇ ಅಂತ ಅನಿಸಿತು. ನಾನಾ ಬವಣೆಗಳ ನಡುವೆಯೂ ಮಾನವನ […]