ಮತದಾನ ಜಾಗೃತಿಗಾಗಿ ಪ್ರಜ್ಞಾವಂತರಿಗೊಂದು ಸವಾಲ್ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ: ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಸಪ್ರಶ್ನೆ ಸ್ಪರ್ಧೆ ಮೂಲಕ ಮತದಾರರಿಗೆ ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಸ್ವೀಪ್ ಸಮಿತಿಯ ಕಾರ್ಯಕ್ರಮಗಳ ಮಾಹಿತಿಗೆಂದೇ ರೂಪಿಸಿರುವ ಇ-ಪತ್ರಿಕೆಯಲ್ಲಿ , ಚುನಾವಣೆಯ ಬಗ್ಗೆ ನಿಮಗೆಷ್ಟು ತಿಳಿದಿದೆ ಎಂಬ ವಿಷಯದ ಬಗ್ಗೆ, ಪ್ರಜ್ಞಾವಂತರಿಗೊಂದು ಸವಾಲ್ ಎಂಬ ಕುತೂಹಲಕಾರಿ ಪಶ್ನೆಗಳನ್ನು ಒಳಗೊಂಡ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾವಹಿಸುವವರು ಪ್ರತಿದಿನ […]