ಪರ್ಯಾಯಕ್ಕೆ ಆಗಮಿಸಿದ ಜಪಾನ್ ನಿಯೋಗದಿಂದ ಕೆಮುಂಡೇಲು ಅನುದಾನಿತ ಶಾಲೆಗೆ ಭೇಟಿ

ಉಡುಪಿ: ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿರುವ ಜಪಾನ್ ದೇಶದ ರೆವ್ ಕೋಶೋ ನಿವಾನೋ ಮತ್ತು ಅವರ 7 ಸದಸ್ಯರ ನಿಯೋಗವು ಉಡುಪಿ ಜಿಲ್ಲೆಯ ಎಲ್ಲೂರು ಸಮೀಪದ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಿದರು. ಜಪಾನಿನ ರಿಷ್ಯೋ ಕೊಸೈ ಕಾಯ್ ಸಂಸ್ಥೆಯ ನಿಯೋಜಿತ ಮಹಾ ಅಧ್ಯಕ್ಷೆ ರೆವ್ ಕೋಶೋ ನಿವಾನೋ ಅವರು ಸೇವೆಯೇ ಪರಮ ಧರ್ಮ ಎಂಬ ತತ್ವವನ್ನು ನಂಬಿದವರು. ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ […]

ಅನಂತೇಶ್ವರ ದೇವಸ್ಥಾನದಲ್ಲಿ ಮಧ್ವವಿಜಯ ಮಂಗಳ ಮಹೋತ್ಸವ ಕಾರ್ಯಕ್ರಮ

ಉಡುಪಿ: ಮಧ್ವಾಚಾರ್ಯರು ಅದೃಶ್ಯರಾಗಿರುವ ಅನಂತೇಶ್ವರ ದೇವಸ್ಥಾನದಲ್ಲಿ ಸೌರ ಮಧ್ವನವಮಿ ಪ್ರಯುಕ್ತ ಮಧ್ವವಿಜಯದ ಮಂಗಳ ಮಹೋತ್ಸವ ನಡೆಯಿತು. ವಿದ್ವಾನ್ ಪ್ರಸನ್ನಾಚಾರ್ಯರು ಕಳೆದ ಮೂರು ವರ್ಷಗಳಿಂದ ಆನ್ಲೈನ್ ಮೂಲಕ ವಿಶ್ವಾದ್ಯಂತ ಜನರಿಗೆ ಮಧ್ವ ವಿಜಯ ಪಾಠ ಮಾಡಿದ್ದು ಅದರ ಮಂಗಳ ಮಹೋತ್ಸವ ಅನಂತೇಶ್ವರದಲ್ಲಿ ನಡೆಯಿತು. ಸಂಜೆ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರತಿನಿಧಿಗಳಾಗಿ ಆಗಮಿಸಿದ ವಿದ್ಯಾರ್ಥಿಗಳು ಮಧ್ವವಿಜಯದ ಆಚಾರ್ಯರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಅನುವಾದ ಮಾಡಿದರು. ಪರ್ಯಾಯ ಪುತ್ತಿಗೆ ಸ್ವಾಮೀಜಿಗಳು ಎಲ್ಲರಿಗೂ ಆಶೀರ್ವಾದ ನೀಡಿ, ಆನ್ಲೈನ್ ಮೂಲಕ ಮಠದಿಂದ ಜ್ಞಾನಪ್ರಸಾರ ನಿರಂತರವಾಗಿ […]

ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಉಡುಪಿ ಭೇಟಿ

ಉಡುಪಿ: ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಅವರು ಆಂಧ್ರ ಪ್ರದೇಶದ ಹೋಟೆಲ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅವರನ್ನು ಗೌರವಿಸಿ ಆಶೀರ್ವದಿಸಿದರು ಪರ್ಯಾಯದ ಆಹ್ವಾನ ಪತ್ರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಆದಾಯ ಶಾಖಾ ಅಧಿಕಾರಿ ಆನಂದ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.

ಪುತ್ತಿಗೆ ಶ್ರೀಗಳಿಂದ ಅದಮ್ಯ ಚೇತನ ಸಂಸ್ಥೆಗೆ ಭೇಟಿ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ನಡೆಸುತ್ತಿರುವ ಬೃಹತ್ ಸಮಾಜ ಸೇವಾ ಸಂಸ್ಥೆಯಾದ ಅದಮ್ಯ ಚೇತನ ಕಾರ್ಯಾಲಯಕ್ಕೆ ಭೇಟಿ ನೀಡಿದ ಪೂಜ್ಯ ಪುತ್ತಿಗೆ ಶ್ರೀಪಾದರು ಸಂಸ್ಥೆ ನಡೆಸುತ್ತಿರುವ ಬೃಹತ್ ಅನ್ನದಾನ, ದಾಸೋಹ ಕಾರ್ಯ ವೈಖರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಸಿಬ್ಬಂದಿಯವರ ಜೊತೆಗೆ ಪೂಜ್ಯ ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು. ಪೂಜ್ಯ ಶ್ರೀಪಾದರು ಭಗವದ್ಗೀತೆಯ ಸಂದೇಶವನ್ನು ನೀಡಿ, ಜನಸೇವೆಯೇ ಗೀತೆಯ ಪ್ರಮುಖ […]

ಜೆ.ಎಸ್.ಬಿ ಸಮಾಜದಿಂದ ಲಕ್ಷ ತುಳಸೀ ಅರ್ಚನೆ: ಪುತ್ತಿಗೆ ಶ್ರೀಪಾದರಿಗೆ ಗೌರವ

ಉಡುಪಿ: ಸ್ವಾತಂತ್ರ್ಯ ಉತ್ಸವದ ಶುಭ ಸಂದರ್ಭದಲ್ಲಿ ಜೆ.ಎಸ್.ಬಿ. ಸಮಾಜದವರು ಗೋಕರ್ಣ ಮಠಾಧೀಶರ ಶುಭಾರ್ಶೀವಾದದೊಂದಿಗೆ ತಮ್ಮ ದ್ವಾರಕಾನಾಥ ಭವನದಲ್ಲಿ ಆಯೋಜಿಸಿದ್ದ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಭಕ್ತ ಜನರ ಅಪೇಕ್ಷೆ ಮೇರೆಗೆ ಪೂಜ್ಯ ಪುತ್ತಿಗೆ ಶ್ರೀಪಾದರು ಭಾಗವಹಿಸಿ ಶುಭಾಶೀರ್ವಚನ ನೀಡಿದರು. ಪೂಜ್ಯ ಶ್ರೀಪಾದರನ್ನು ಭಕ್ತಿ ಗೌರವಾದರಗಳೊಂದಿಗೆ ಸ್ವಾಗತಿಸಿ ಪಾದ ಪೂಜೆಯನ್ನು ನೆರವೇರಿಸಿದರು. ಪೂಜ್ಯ ಶ್ರೀಪಾದರು ಉಪಸ್ಥಿತರಿರುವ ಎಲ್ಲ ಸಮಾಜ ಬಾಂಧವರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ನೀಡಿ ಮುಂಬರುವ ತಮ್ಮ ಪರ್ಯಾಯಕ್ಕೆ ಎಲ್ಲರನ್ನು ಪ್ರೀತಿಯಂದ ಆಮಂತ್ರಿಸಿದರು.