ಪುತ್ತಿಗೆ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ ಸಂಪನ್ನ; ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರ್ಯಾಯ ನಿಟ್ಟಿ‌ಲ್ಲಿ ನಾಲ್ಕನೇ ಬಾರಿ‌ ಜ.18 ರಂದು ಸರ್ವಜ್ಞ ಪೀಠವನ್ನೇರಲಿದ್ದು, ಪರ್ಯಾಯ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ ಮುಹೂರ್ತವು ಬುಧವಾರ ನೆರವೇರಿತು. ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ.8 ರಂದು ತಮ್ಮ ಶಿಷ್ಯ‌ ಶ್ರೀಸುಶ್ರೀಂದ್ರತೀರ್ಥರ ಒಡಗೂಡಿ ಶ್ರೀಸುಗುಣೇಂದ್ರತೀರ್ಥರು ಉಡುಪಿ ಪುರಪ್ರವೇಶ ಮಾಡಲಿದ್ದಾರೆ. ಧಾನ್ಯ ಮುಹೂರ್ತ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗ್ಗಿನ […]

ಉಡುಪಿ ಪರ್ಯಾಯ ಮಹೋತ್ಸವಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಆಹ್ವಾನ

ಉಡುಪಿ: ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪ್ರಧಾನ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದ ಅಭಿಯಾನದ ಮಹತ್ವವನ್ನು ವಿವರಿಸಿ, ಭಗವದ್ಗೀತೆ ಪುಸ್ತಕದೊಂದಿಗೆ ಶ್ರೀಕೃಷ್ಣ ಪ್ರಸಾದವಿತ್ತು ಪರ್ಯಾಯ ಮಹೋತ್ಸವಕ್ಕೆ ಉಡುಪಿಗೆ ಆಗಮಿಸುವಂತೆ ಮನವಿ ಮಾಡಲಾಯಿತು. ವಿದ್ವಾಂಸರ ಲೋಕಭಾಷಾ ಪ್ರಚಾರ ಮಿತಿಯ ರಾಷ್ಟ್ರಾಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ್, ಸಂಸ್ಕೃತ ವಿದ್ವಾಂಸ ಒಡಿಶಾದ ಡಾ. ಬಿಪಿನ ವಿಹಾರಿ ಶತಪತಿ, ರಾಜಸ್ಥಾನದ ಡಾ. ನಿರಂಜನ್ ಸಾಹು, ಅಸ್ಸಾಂನ ಡಾ. ಕುಶಲ ಕಲಿತಾ, ಉತ್ತರ […]

 ಪರ್ಯಾಯ ಪುತ್ತಿಗೆ ಮಠದ ಬಾಳೆ ಮುಹೂರ್ತ ಕಾರ್ಯಕ್ರಮ ಸಂಪನ್ನ

ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಮೊದಲನೆಯ ಕಾರ್ಯಕ್ರಮ ಬಾಳೆ ಮುಹೂರ್ತ ಶುಕ್ರವಾರ ಬೆಳಿಗ್ಗೆ 8.20ರ ಧನುರ್ನಗ್ನದಲ್ಲಿ ನಡೆಯಿತು. 2024ರ ಜ. 18ರಂದು ಸರ್ವಜ್ಞ ಪೀಠವೇರಿ ಚತುರ್ಥ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ್ಯ ಸ್ವೀಕರಿಸಲಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಮಠದ ನಿಗದಿತ ಸ್ಥಳದಲ್ಲಿ ಬಾಳೆ ಮತ್ತು ತುಳಸಿ ಸಸಿಗಳನ್ನು ನೆಡುವ ಮೂಲಕ ಸಾಂಪ್ರದಾಯಿಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು. ಹೆರ್ಗ ವೇದವ್ಯಾಸ ಭಟ್, ಕೇಂಜ […]