ಪರ್ಯಾಯ ಮಹೋತ್ಸವಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ; ಝಗಮಗಿಸುತ್ತಿದೆ ಕೃಷ್ಣನೂರು ಉಡುಪಿ…..

ಉಡುಪಿ: 252ನೆಯ ಪರ್ಯಾಯದ ಮಹೋತ್ಸವದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೇ ಬಾರಿಗೆ ಪರ್ಯಾಯಕ್ಕೆ ಅಣಿಯಾಗುತ್ತಿದ್ದಾರೆ. ಜ. 18 ರ ಬೆಳಗ್ಗೆ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್‌ ನಡೆಯಲಿದ್ದು, ಬುಧವಾರ ಬೆಳಗ್ಗೆ ಭಕ್ತರು ನಗರಕ್ಕೆ ಆಗಮಿಸುತ್ತಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರದ ಎಲ್ಲಾ ರಸ್ತೆಗಳೂ ಶ್ರೀಕೃಷ್ಣನ ಮಠದತ್ತ ಮುಖಮಾಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿಕೊಂಡಿದೆ. ಕಾಪು ದಂಡತೀರ್ಥದಿಂದ ಉಡುಪಿವರೆಗಿನ ರಾಷ್ಟ್ರೀಯ ಹೆದ್ದಾರಿ, ಉಡುಪಿ ನಗರದೊಳಗಿನ ಎಲ್ಲ ರಸ್ತೆಗಳೂ ಝಗಮಗಿಸುತ್ತಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಮಧ್ಯರಾತ್ರಿ 1.30ಕ್ಕೆ ದಂಡತೀರ್ಥ ಮಠದಲ್ಲಿ […]

ಪುತ್ತಿಗೆ ಪರ್ಯಾಯ ಸಂಭ್ರಮಕ್ಕೆ ಸಂದೀಪ್ ನಾರಾಯಣ್ ಸ್ವರಮಾಧುರ್ಯದ ಮೆರುಗು

ಉಡುಪಿ: ಪುತ್ತಿಗೆ ಪರ್ಯಾಯ ನಡೆಯುತ್ತಿರುವ ಸಂಭ್ರಮದ ಕ್ಷಣಗಳಿಗೆ ಕರ್ನಾಟಕ ಸಂಗೀತದ ಗಾನ ಮಾಧುರ್ಯದ ರಸದೌತಣ ನೀಡಲು ಜ. 19 ರಂದು ರಾಜಾಂಗಣದಲ್ಲಿ ಸಂಜೆ 7 ರಿಂದ ಸಂದೀಪ್ ನಾರಾಯಣ್ ಮತ್ತು ತಂಡದವರಿಂದ ಸಂಗೀತ ಕಛೇರಿ ನಡೆಯಲಿದೆ. ಮತ್ತೂರು ಶ್ರೀನಿಧಿ, ಕೆ.ಯು.ಜಯಚಂದ್ರ ರಾವ್, ಗಿರಿಧರ್ ಉಡುಪ ಸಾಥ್ ನೀಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶ

ಪುತ್ತಿಗೆ ಪರ್ಯಾಯ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ ಪುತ್ತಿಗೆ ಯತಿದ್ವಯರು

ಉಚ್ಚಿಲ: ಪುತ್ತಿಗೆ ಪರ್ಯಾಯ (Puttige Paryaya) ಪೂರ್ವಾಭಾವಿ ಪ್ರಾಂತ ಸಂಚಾರ ನಿಮಿತ್ತ ಇಲ್ಲಿನ ಐತಿಹಾಸಿಕ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಹಾಗೂ ಅವರ ಶಿಷ್ಯ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಯತಿದ್ವಯರು ರಾತ್ರಿ ಪೂಜೆ, ತೊಟ್ಟಿಲ ಸೇವೆ, ಅನುಗ್ರಹ ಸಂದೇಶ ನೀಡಿದರು. ವಿಶ್ವ ಗೀತಾ ಪರ್ಯಾಯಕ್ಕೆ ಆಹ್ವಾನ ನೀಡಿ ಫಲ ಮಂತ್ರಾಕ್ಷತೆ ನೀಡಿದರು.

ಪುತ್ತಿಗೆ ಪರ್ಯಾಯ: ಪುತ್ತಿಗೆ ಶ್ರೀಗಳಿಂದ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ಗೆ ಭೇಟಿ

ಮಲ್ಪೆ: ಉಡುಪಿಯ ಶ್ರೀಕೃಷ್ಣ ಮತ್ತು ಕರಾವಳಿಯ ಮೀನುಗಾರರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಶ್ರೀಕೃಷ್ಣ ಮತ್ತು ಮಹಾಲಕ್ಷ್ಮೀ ದೇವರ ಪ್ರಿಯ ಸಮಾಜ ಮೊಗವೀರರದ್ದು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಪರ್ಯಾಯ ಮಹೋತ್ಸವದ (Puttige Paryaya) ಪೂರ್ವಭಾವಿಯಾಗಿ ಶ್ರೀಗಳು ಸೋಮವಾರ ಮಲ್ಪೆಯ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು. ಮಹಾಲಕ್ಷ್ಮೀ ಬ್ಯಾಂಕ್‌, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಹಾಗೂ ಮಲ್ಪೆಯ ವಿವಿಧ […]

ಪುತ್ತಿಗೆ ಪರ್ಯಾಯ: ಚಪ್ಪರ ಮುಹೂರ್ತ ಸಂಪನ್ನ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಚಪ್ಪರ ಮುಹೂರ್ತವು ಬುಧವಾರ ನಡೆಯಿತು. ರಾಘವೇಂದ್ರ ಕೊಡಂಚ ಅವರ ಪೌರೋಹಿತ್ಯದಲ್ಲಿ, ಚಪ್ಪರ ನಿರ್ವಹಣೆಯ ರಾಜೇಶ್ , ಮುಚ್ಚೂರು ರಾಮಚಂದ್ರ ಭಟ್, ನಾಗರಾಜ್‌ ಉಪಾಧ್ಯ, ಮಠದ ಮೇಸ್ತ್ರಿ ಪದ್ಮನಾಭ ಇವರಿಗೆ ಮುಹೂರ್ತ ಪ್ರಸಾದ ನೀಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಪರ್ಯಾಯ ಪ್ರಚಾರ ವಾಹನದ ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಿದರು. ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂರ್ , ಕಾರ್ಯದರ್ಶಿ ರಾಘವೇಂದ್ರ […]