ಇಸ್ರೋದಿಂದ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆ: ಸ್ವಾಯತ್ತ ಲ್ಯಾಂಡಿಂಗ್ ಯಶಸ್ವಿಯಾಗಿ ನಿರ್ವಹಿಸಿದ ಮರುಬಳಕೆ ವಾಹನ ‘ಪುಷ್ಪಕ್’
ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮಾದರಿ ‘ಪುಷ್ಪಕ್’,(Pushpak) ರೆಕ್ಕೆಯ ವಾಹನವು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ (RLV-TD) ಎಂದೂ ಕರೆಯಲ್ಪಡುವ ಪುಷ್ಪಕ್ ಒಂದು ನಿರ್ದಿಷ್ಟ ಎತ್ತರದಿಂದ ಹೆಲಿಕಾಪ್ಟರ್‌ನಿಂದ ಬಿಡುಗಡೆಯಾದ ನಂತರ ರನ್‌ವೇಯಲ್ಲಿ ಸ್ವಾಯತ್ತ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಕೈಗೊಂಡಿದೆ. ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಮಾರ್ಚ್ 22, 2024 ರಂದು ಬೆಳಿಗ್ಗೆ 7:10 ಕ್ಕೆ ನಡೆಸಲಾದ ಪ್ರಯೋಗವು […]