ದ.ಕ. ಜಿಲ್ಲೆ: ಆ. 30ರಿಂದ ಪಿಯು ಕಾಲೇಜು ಆರಂಭ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪಿಯು ಕಾಲೇಜುಗಳನ್ನು ಆ.30ರಿಂದ ಹಿಂದಿನ ನಿರ್ಣಯದಂತೆ ಆರಂಭಿಸಲು ದ.ಕ. ಜಿಲ್ಲಾಡಳಿತ ತೀರ್ಮಾನಿಸಿದೆ. ಪಿಯು ಕಾಲೇಜುಗಳು, ವಿದ್ಯಾರ್ಥಿಗಳು ಸಿಇಟಿಗೆ ಸನ್ನದ್ಧರಾಗಲು ಇನ್ನು ಹೆಚ್ಚು ಸಮಯ ಇಲ್ಲದ ಕಾರಣ ಅವರಿಗೆ ಹಂತ ಹಂತವಾಗಿ ತರಗತಿ ಆರಂಭಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಕಾಲೇಜುಗಳಿಂದಲೇ ಸೂಕ್ತ ಕಾರ್ಯಯೋಜನೆ ನೀಡಲು ಈ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ.30ರಂದು ಪಿಯು ಭೌತಿಕ ತರಗತಿ ಆರಂಭಗೊಳ್ಳಲಿದೆ. ಅದಕ್ಕೆ ಬೇಕಾದ ಮಾರ್ಗಸೂಚಿಗಳನ್ನು ಆ.28ರಂದು ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ […]