ಉಡುಪಿ: ಫೆ. 5ಕ್ಕೆ ಡಿಸಿ ಕಚೇರಿ ಮುಂಭಾಗ ಮನೆ ನಿವೇಶನದಾರರಿಂದ ಪ್ರತಿಭಟನೆ

udupixpress

ಉಡುಪಿ: ನಗರಸಭೆ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಖರೀದಿಸಿ ಭೂಪರಿವರ್ತನೆ ಮಾಡಿ ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಿದ್ದಾರೆ. ಅದನ್ನು ಖರೀದಿಸಿದವರಿಗೆ ಮನೆಕಟ್ಟಲು ಕಳೆದ 15 ವರ್ಷಗಳಿಂದ ಒಂದಲ್ಲ ಒಂದು ಕಾನೂನು ತೊಡಕು ಉಂಟಾಗುತ್ತಿದೆ. ಇದನ್ನು ಪರಿಹರಿಸುವಂತೆ ಒತ್ತಾಯಿಸಿ ಫೆಬ್ರವರಿ 5ರ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಮತ್ತು ಪ್ರಾಧಿಕಾರ ವ್ಯಾಪ್ತಿಯ ಸಂತ್ರಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.