ಬೈಂದೂರು: ಅಕ್ರಮ ಗಣಿಗಾರಿಕೆಗೆ ದಾಳಿ; ಓರ್ವನ ಬಂಧನ, ಸೊತ್ತು‌ ವಶ

ಉಡುಪಿ: ಬೈಂದೂರು ತಾಲೂಕಿನ ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆಲೂರು ಗ್ರಾಮದ ಮನೋಜ ಮೊಗವೀರ(43) ಬಂಧಿತ ಆರೋಪಿ. ವಿಚಾರಣೆ ವೇಳೆ ಸರಕಾರಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಸುಮಾರು 60*40 ಉದ್ದ ಅಗಲದ ವಿಸ್ತೀರ್ಣ ಜಾಗದಲ್ಲಿ ನೆಲದಿಂದ ಸುಮಾರು 3 ಅಡಿ ಅಳದಲ್ಲಿ ಸುಮಾರು 60 ಅಡಿ ಉದ್ದ ಮತ್ತು 40 ಅಡಿ ಅಗಲದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು […]