ಕುತೂಹಲ ಹೆಚ್ಚಿಸಿದ ಪ್ರಭಾಸ್​ ಫಸ್ಟ್ ಲುಕ್‌, ಪ್ರಾಜೆಕ್ಟ್ ಕೆ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ

ಪ್ರಭಾಸ್​ ಫಸ್ಟ್ ಲುಕ್‌: ಬಹುನಿರೀಕ್ಷಿತ ಪ್ರಾಜೆಕ್ಟ್ ಕೆ ಸಿನಿಮಾಗೆ ಬಂಡವಾಳ ಹೂಡುತ್ತಿರುವ ವೈಜಯಂತಿ ಮೂವೀಸ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್‌ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದೆ. ಪೋಸ್ಟರ್ ಅನ್ನು ಹಂಚಿಕೊಳ್ಳುವಾಗ, ”ಹೀರೋಸ್​ ರೈಸಸ್, ಈ ಕ್ಷಣದಿಂದ ಗೇಮ್​ ಚೇಂಜ್​ ಆಗಲಿದೆ. ಪ್ರಾಜೆಕ್ಟ್ ಕೆ ಚಿತ್ರದಿಂದ ರೆಬೆಲ್​ ಸ್ಟಾರ್ ಪ್ರಭಾಸ್​​ ಮೊದಲ ನೋಟ, ಜುಲೈ 20ರಂದು (ಭಾರತದ ಸಮಯಾನುಸಾರ ಜುಲೈ 21) ಪ್ರೊಜೆಕ್ಟ್​ ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್​ ಹೊರಬರಲಿದೆ” ಎಂದು ಬರೆದುಕೊಂಡಿದ್ದಾರೆ. […]