ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಪಡುಬಿದ್ರೆ ಶಾಖೆ ಉದ್ಘಾಟನೆ
ಪಡುಬಿದ್ರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಉಡುಪಿ ಜಿಲ್ಲೆಯ ಪ್ರಥಮ ಶಾಖೆಯನ್ನು ಪಡುಬಿದ್ರಿ ಶ್ರೀ ಮಹಾ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಯಿತು. ನೂತನ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾತನಾಡಿ, ಹಳೆಯಂಗಡಿಯ ಭೀಷ್ಮ ದಿ.ನಾರಾಯಣ ಸನಿಲ್ ರವರ ಆದರ್ಶಗಳ ಮೂಲಕ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೊ.ಆಪರೇಟಿವ್ ಸೊಸೈಟಿ ಪ್ರಾಮಾಣಿಕತೆಯ ಸೇವೆ ನೀಡುವ ಮೂಲಕ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ […]