ತಂಗಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನೇಣಿಗೆ ಶರಣಾದ ಖಾಸಗಿ ಬಸ್ ಮಾಲೀಕ

ಸುಳ್ಯ: ತಂಗಿಗೆ ವಾಟ್ಸಾಪ್‌ ವಾಯ್ಸ್ ಸಂದೇಶ ಕಳುಹಿಸಿ ಅವಿನಾಶ್ ಮೋಟಾರ್ಸ್ ನ ಮಾಲೀಕ ನಾರಾಯಣ ರೈ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು (ಮಂಗಳವಾರ )ಬೆಳಕಿಗೆ ಬಂದಿದೆ. ಅವಿನಾಶ್ ರೈ ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದರು. ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು. ರಾತ್ರಿ 11.45  ರ ಸುಮಾರಿಗೆ ಅವರು ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ತಂಗಿ ಇಂದು ಬೆಳಿಗ್ಗೆಯಷ್ಟೇ […]