ಉಡುಪಿ: ವೈಕುಂಠ ಬಾಳಿಗ ಕಾನೂನು ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಪ್ರಕಾಶ್ ಕಣಿವೆ ಅವರಿಗೆ ಪ್ರದೀಪ ಪುರಸ್ಕಾರ
ಉಡುಪಿ: ಸುಜನ ಟ್ರಸ್ಟ್ ಬಸಾಪುರದ ಪ್ರತಿಷ್ಠಿತ ಪ್ರದೀಪ ಪುರಸ್ಕಾರಕ್ಕೆ ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲ ಡಾ. ಪ್ರಕಾಶ್ ಕಣಿವೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 20ರಂದು ಕೊಪ್ಪ ತಾಲೂಕಿನ ಬಿಲಗದ್ದೆ ಶಾಲಾ ಮೈದಾನದಲ್ಲಿ ಪ್ರದೀಪ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಣಿವೆ ಗ್ರಾಮದ ಡಾ. ಪ್ರಕಾಶ್ ಅವರು ಎರಡು ರಾಜ್ಯಗಳಲ್ಲಿ ಅಪಾರ ಶಿಷ್ಯರನ್ನು ಹೊಂದಿದ್ದಾರೆ. ಹಳ್ಳಿ ಶಿಕ್ಷಣವನ್ನು ಪಡೆದು ಶಿವಮೊಗ್ಗ ನ್ಯಾಷನಲ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದು, ಮೈಸೂರಿನ ಮಾನಸ […]