ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಿಷಿ ಸುನಕ್​ : ಉದ್ಘಾಟನೆ ಹೊಸ್ತಿಲಲ್ಲಿರುವ ಅಮೆರಿಕದ ಅಕ್ಷರಧಾಮ

ವಾಷಿಂಗ್ಟನ್​: ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿ ನಿರ್ಮಾಣವಾಗಿರುವ ವಿಶ್ವದ ಎರಡನೇ ಅತೀ ದೊಡ್ಡ ದೇವಾಲಯ ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮ ಉದ್ಘಾಟನೆಗೆ ತಯಾರಾಗಿದೆ.ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿ ನಿರ್ಮಾಣವಾಗಿರುವ ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮ ಅಕ್ಟೋಬರ್​ 8 ರಂದು ಉದ್ಘಾಟನೆಯಾಗಲಿದೆ.ದೇವಾಲಯದ ಉದ್ಘಾಟನೆಗೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಶುಭಾಶಯಗಳನ್ನು ಕೋರಿದ್ದಾರೆ. ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪತ್ರ ಬರೆದಿರುವ ಪ್ರಧಾನಿ ಮೋದಿ ಅಕ್ಷರಧಾಮದಲ್ಲಿರುವ ಎಲ್ಲರಿಗೂ ಹಾಗೂ ಅದರಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಶುಭಾಶಯಗಳನ್ನು ಕಳುಹಿಸಿದ್ದಾರೆ. ಪತ್ರದಲ್ಲಿ […]