ಉಡುಪಿ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ-ಪ್ರತಿಭಾ ಪುರಸ್ಕಾರ-ಸಮ್ಮಾನ

ಉಡುಪಿ: ಇಂದು-ನಾಳೆಯ ಆಲೋಚನೆಗಾಗಿ ಪತ್ರಕರ್ತರ ದಿನಾಚರಣೆ ಮಾಡುತ್ತೇವೆಯೇ ಹೊರತು ಪತ್ರಕರ್ತರ ದಿನಾಚರಣೆ ಸೆಲೆಬ್ರೇಶನ್ ಅಲ್ಲ. ಗಾಂಧೀಜಿ ದಿನಾಚರಣೆ, ಅಂಬೇಡ್ಕರ್ ದಿನಾಚರಣೆ ಮಾಡುವಾಗಲೂ ಇದೇ ಯೋಚನೆ ಇರಬೇಕು. ಕೇವಲ ವರ್ಗ, ಜಾತಿಗೆ ಸೀಮಿತವಲ್ಲ. ನಿನ್ನೆ-ಇಂದು-ನಾಳೆಯನ್ನು ಬೆಸೆಯುವುದೇ ದಿನಾಚರಣೆ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್.ಧರ್ಮ ಹೇಳಿದರು. ಅವರು ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು […]