ಕಟಪಾಡಿಯ ಬಹುಮುಖ ಪ್ರತಿಭೆ ಪ್ರಥಮ್ ಕಾಮತ್ ಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ
ಕಟಪಾಡಿ: ಶಾಸಕರ ಜನ ಸ್ಪಂದನ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಗವಾನ್ ಬುದ್ಧ, ಬಸ ವೇಶ್ವರ, ಅಂಬೇಡ್ಕರ್, ಡಾ. ಶಿವಕುಮಾರ ಸ್ವಾಮೀಜಿ ಜಯಂತಿ ಹಾಗೂ ಸಂಗಮ ಸಮಾವೇಶ ಸಮಾರಂಭದಲ್ಲಿ ‘ಸಂಗಮ ರತ್ನ’ ರಾಷ್ಟ್ರೀಯ ಪ್ರಶಸ್ತಿಯನ್ನು ಕಟಪಾಡಿಯ ಬಹುಮುಖ ಪ್ರತಿಭೆಯಾದ ಯುವ ಜಾದೂಗಾರ ಪ್ರಥಮ ಕಾಮತ್ ಪಡೆದಿರುತ್ತಾರೆ. ಮೇ 22 ರ ಭಾನುವಾರ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಯಿತು. ಡಾ. ಆರೂಢ ಭಾರತೀ […]