ನಟ ಪ್ರಮೋದ್ ಶೆಟ್ಟಿ ಕುಟುಂಬದವರಿಂದ ಶ್ರೀಕೃಷ್ಣ ಮಠ ಭೇಟಿ

ಉಡುಪಿ: ಕನ್ನಡ ಚಲನಚಿತ್ರ ನಟ ಪ್ರಮೋದ್ ಶೆಟ್ಟಿಯವರು ಕುಟುಂಬ ಸಮೇತರಾಗಿ ಶ್ರೀಕೃಷ್ಣಮಠಕ್ಕಾಗಮಿಸಿ ಕೃಷ್ಣದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಾರಾಯಣ ಶರಳಾಯ ಉಪಸ್ಥಿತರಿದ್ದರು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ: ಕಿರಿಕ್ ಪಾರ್ಟಿಯಂತೆ ಕಚಗುಳಿಯಿಡುವ ಕಥೆಯೊಂದಿಗೆ ಬರುತ್ತಿದೆ ಪರಂವಃ ಪಿಕ್ಚರ್ಸ್

ರಕ್ಷಿತ್ ಶೆಟ್ಟಿಯ ಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಪಿಕ್ಚರ್ಸ್ ಹೊಸ ಸಿನಿಮಾದೊಂದಿಗೆ ಮುಂದೆ ಬರುತ್ತಿದೆ. ಈ ಬಗ್ಗೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ನಾವು ಹಿಂದೆ ಪ್ರಸ್ತುತಪಡಿಸಿದ್ದಕ್ಕಿಂತ ವಿಭಿನ್ನವಾದ ಪ್ರಕಾರದಿಂದ ಅಸಾಧಾರಣವಾಗಿ ನಿರ್ಮಿಸಿದ ಚಲನಚಿತ್ರ. ಸೃಜನಾತ್ಮಕವಾಗಿ ಪ್ರಚೋದಿತ ಯುವಕರ ಭಾವೋದ್ರಿಕ್ತ ಗುಂಪು ಈ ಉಲ್ಲಾಸದ ಮತ್ತು ತಂಗಾಳಿಯ ಚಲನಚಿತ್ರವನ್ನು ರಚಿಸಲು ಒಗ್ಗೂಡಿದೆ. ಅದು ನಿಮ್ಮನ್ನು ಭೂತಕಾಲದ ಸುಖದ ಸ್ಮೃತಿಯ ಹಾದಿಯಲ್ಲಿ ನಡೆಸುವುದು ಖಚಿತ. ಈ ಚಿತ್ರವನ್ನು ಚಿತ್ರಿಸಿದ ರೀತಿಯಲ್ಲಿ, ದೇಶದ ಯಾವುದೇ ಚಲನಚಿತ್ರವು ಈ […]
ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಶ್ರದ್ಧಾಂಜಲಿ ಸಭೆ

ಉಡುಪಿ: ಶ್ರೀನಗರ-ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಉಗ್ರರ ದಾಳಿಗೆ ತುತ್ತಾಗಿ ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್ ಪಡೆ ಯೋಧರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಶುಕ್ರವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು. ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಮಂದಾರ್ತಿ ಮಾತನಾಡಿ, ದೇಶವನ್ನು ನುಚ್ಚುನೂರು ಮಾಡಬೇಕು. ದೇಶದ ಅಸ್ತಿತ್ವವನ್ನು ದುರ್ಬಲಗೊಳಿಸಬೇಕೆಂದು ಉಗ್ರರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ದೇಶದ ಜನತೆ ಅವಕಾಶ ನೀಡಬಾರದು. ದೇಶದ ಗಡಿ ಕಾಯುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ಈ ಕೃತ್ಯದ […]