ಉಡುಪಿ ವಿಡಿಯೋ ಪ್ರಕರಣದ ಹಿಂದೆ ಇಸ್ಲಾಮಿಕ್ ಸಂಘಟನೆಗಳ ಕೈವಾಡ ಸಾಧ್ಯತೆ: ಪ್ರಮೋದ್ ಮುತಾಲಿಕ್
ಮೈಸೂರು: ಉಡುಪಿ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಪ್ರಕರಣದ ಹಿಂದೆ ಇಸ್ಲಾಮಿಕ್ ಸಂಘಟನೆಗಳ ಕೈವಾಡವಿದೆ. ಆದ್ರೆ ಈ ಬಗ್ಗೆ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಆರಂಭದಲ್ಲೇ ಪ್ರಕರಣ ದಾರಿ ತಪ್ಪಿಸುವ ಕೆಲಸ ಆಗಿತ್ತು ಎಂದು ದೂರಿದ್ದಾರೆ. ಘಟನೆ ನಡೆಯದೇ ಇದ್ದಿದ್ದರೆ ಮಕ್ಕಳಿಂದ ಏಕೆ ತಪ್ಪೊಪ್ಪಿಗೆ ಪತ್ರ ಏಕೆ […]
ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ಆರೋಪ: ಪ್ರಮೋದ್ ಮುತಾಲಿಕ್ ವಿರುದ್ದದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಶ್ರೀರಾಮ ಸೇನೆಯ ಸ್ಥಾಪಕ-ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ 2017 ರಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 196 ರ ಅಡಿಯಲ್ಲಿ ಅಗತ್ಯವಿರುವ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ದೂರಿನಲ್ಲಿ ಅಪರಾಧದ ಅರಿವನ್ನು ಪಡೆದಿದ್ದಾರೆ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಗಮನಿಸಿದ್ದಾರೆ. […]
ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆ: ಬಿಜೆಪಿಯಿಂದ ಬೆಂಬಲದ ನಿರೀಕ್ಷೆ
ಕಾರ್ಕಳ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ತನ್ನನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮುತಾಲಿಕ್ ರವರು 47 ವರ್ಷಗಳಿಂದ ಮನೆ ಮಠ ಕುಟುಂಬವನ್ನು ತ್ಯಜಿಸಿ ದೇಶ ಮತ್ತು ಧರ್ಮ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ರಾಜಕೀಯ ಅವಕಾಶಗಳಿದ್ದಾಗಲೂ ತಿರಸ್ಕರಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡು ದೇಶ […]
ಪಕ್ಷೇತರ ಅಭ್ಯರ್ಥಿಯಾಗಿ ಕಾರ್ಕಳದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ: ಅಧಿಕೃತ ಘೋಷಣೆ
ಶ್ರೀರಾಮ ಸೇನೆ ಸಂಘಟನೆಯ ಮುಖಂಡ, ಪ್ರಖರ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರದಿಂದ ವಿಧಾನಸಭಾ ಚುನಾವಣೆ ಸ್ಪರ್ಧಿಸಲಿದ್ದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ, ಯರು ಏನೇ ಒತ್ತಡ ಹಾಕಿದರೂ ಕಾರ್ಕಳದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಸಾವಿರಾರು ಕಾರ್ಯಕರ್ತರ ನೀವಿನ ಧ್ವನಿಯಾಗಿ, ಅವರೆಲ್ಲರ ಒತ್ತಡದಿಂದ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ತಾನು ಬಿಜೆಪಿ ಹಾಗೂ ಮೋದಿ ವಿರೋಧಿಯಲ್ಲ. ತಾನು ಕೆಲವು ವ್ಯಕ್ತಿಗಳ ವಿರುದ್ದ, […]
ಬಂಟ್ವಾಳದಲ್ಲಿ ಕಂಡು ಬಂದ ಬರಹ ಪಿ ಎಫ್ ಐ ಸಕ್ರಿಯವಾಗಿರುವ ಸಂಕೇತ: ಮುತಾಲಿಕ್
ಬಂಟ್ವಾಳ: ತಾಲೂಕಿನಲ್ಲಿ ಕಂಡು ಬಂದ ಪಿಎಫ್ ಐ ರಸ್ತೆ ಬರಹ ಒಂದು ಎಚ್ಚರಿಕೆಯಾಗಿದ್ದು ಪಿಎಫ್‌ಐ ಇನ್ನೂ ಸಕ್ರಿಯವಾಗಿದೆ ಎಂಬುದರ ಸಂಕೇತ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಉಡುಪಿಯಲ್ಲಿ ಬುಧವಾರ ಮಾತನಾಡಿದ ಪ್ರಮೋದ್ ಮುತಾಲಿಕ್, ಪಿಎಫ್‌ಐ ಬ್ಯಾನ್ ಅಥವಾ ಬಂಧನದಿಂದ ಅವರ ಆಟ ಮುಗಿಯುವುದಿಲ್ಲ, ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಹೇಳಿದ್ದಾರೆ. ಪಿಎಫ್‌ಐನ ಸಾವಿರಾರು ಕಾರ್ಯಕರ್ತರು ಇನ್ನೂ ಸಕ್ರಿಯವಾಗಿ ಇದ್ದಾರೆ ಎಂದು ಹೇಳಿರುವ ಮುತಾಲಿಕ್, ಕುತಂತ್ರ, ಷಡ್ಯಂತ್ರ, […]