ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಬಿ.ಕಿಶೋರ್ ಕುಮಾರ್ ಭೇಟಿ ಮಾಡಿದ ಮಧ್ವರಾಜ್: ಪ್ರಮೋದ್ ಗೆ ಕಿಶೋರ್ ಬೆಂಬಲ

ಕುಂದಾಪುರ: ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದ ಬಿ.ಕಿಶೋರ್ ಕುಮಾರ್ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಮತಯಾಚಿಸಿದರು. ಗುರುವಾರ ಬೆಳಗ್ಗೆ ಕುಂದಾಪುರ ಕಲಾಕ್ಷೇತ್ರದ ಕಚೇರಿಗೆ ಆಗಮಿಸಿದ ಪ್ರಮೋದ್ ಅವರನ್ನು ಬಿ.ಕಿಶೋರ್ ಕುಮಾರ್ ಹಾಗೂ ಮಾಜಿ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ ಅವರು ಹಸ್ತಲಾಘವ ಕೊಟ್ಟು ಬರಮಾಡಿಕೊಂಡರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಪ್ರಮೋದ್ ಕೈಮುಗಿದು ಕೇಳಿಕೊಂಡರು. […]