ಇನ್ನು ನಾಲ್ಕು ಗಂಟೆಗಳಲ್ಲಿ ವಿಕ್ರಮನ ಗರ್ಭದಿಂದ ಹೊರಬರಲಿದೆ ಪ್ರಗ್ಯಾನ್!! ಚಂದ್ರನ ಮೇಲೆ ಭಾರತದ ರಾಷ್ಟ್ರೀಯ ಚಿಹ್ನೆ ಅಂಕಿತಕ್ಕೆ ಕ್ಷಣಗಣನೆ…
ಬೆಂಗಳೂರು: ಇಸ್ರೋ ವಿಜ್ಞಾನಿಗಳ ತ್ಯಾಗ ಮತ್ತು ಎಡೆ ಬಿಡದ ಪರಿಶ್ರಮವು ಐತಿಹಾಸಿಕ ದಾಖಲೆಯನ್ನು ಬರೆದಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿರಿಸಿದೆ. ಇನ್ನೀಗ ಕೆಲವೇ ಗಂಟೆಗಳಲ್ಲಿ ಪ್ರಗ್ಯಾನ್ ತನ್ನ ಕೆಲಸವನ್ನು ಶುರು ಮಾಡಲಿದೆ. ಚಂದ್ರನ ಮೇಲೆ ಇಳಿದ ನಂತರ ‘ವಿಕ್ರಮ್’ ಸ್ವಲ್ಪ ಹೊತ್ತು ಕಾದು ಧೂಳಿನ ಕಣಗಳು ನೆಲೆಗೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಇದರ ನಂತರ, ಅದು ತನ್ನ ಹೊಟ್ಟೆಯನ್ನು ತೆರೆಯುತ್ತದೆ, ಮತ್ತು ಚಂದ್ರನ ಮೇಲ್ಮೈಗೆ ರಾಂಪ್ ಅನ್ನು ಹಾಕಲಾಗುತ್ತದೆ. ಆರು ಚಕ್ರಗಳ […]