ವಿದ್ಯುತ್ ದರ ಏರಿಕೆ: ಎಂಎಸ್ಎಂಇಗಳಿಗೆ ಹೊರೆ-ಅರಸಪ್ಪ
ಉಡುಪಿ: ಕರ್ನಾಟಕ ವಿದ್ಯುಚ್ಯಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ವಿದ್ಯುತ್ ದರ ₹25 ಪೈಸೆ ಹಾಗೂ ಮಾಸಿಕ ನಿಗದಿತ ಶುಲ್ಕವನ್ನು ರೂ.₹10 ಹೆಚ್ಚಳ ಮಾಡಿರುವುದರಿಂದ ಎಂಎಸ್ಎಂಇಗಳಿಗೆ ಹೊರೆಯಾಗಲಿದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ತಿಳಿಸಿದ್ದಾರೆ. ಎಂಎಸ್‌ಎಂಇಗಳು ಕೋವಿಡ್ ಸಾಂಕ್ರಾಮಿಕ ಮತ್ತು ಆರ್ಥಿಕತೆಯ ತೀವ್ರ ಮಂದಗತಿಯಿಂದ ಕಾರ್ಯಾಚರಣೆ ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿರುವಾಗ ಈ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಮತ್ತಷ್ಟು ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ. ವಿದ್ಯುತ್ ದರದ ವಿಚಾರಣೆಯ ಸಮಯದಲ್ಲಿ ಉದ್ಯಮದ […]