ಪೋಸ್ಟರ್ ಹಿಡಿದು ಏಕಾಂಗಿ ಹೋರಾಟ ನಡೆಸುತ್ತಿರುವ ಮಂಗಳೂರಿನ ಬಾಲಕ: ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿರುವ ಬಾಲಕನ ಕೂಗು ಆಡಳಿತಕ್ಕೆ ಕೇಳುವುದೆ?

ಮಂಗಳೂರು: ರಸ್ತೆಯಲ್ಲಿ ಗುಂಡಿಗೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ ಅತೀಶ್‌ನನ್ನು ಕಳೆದುಕೊಂಡ ಆತನ ಸ್ನೇಹಿತ ಲಿಖಿತ್ ಮಂಗಳೂರು ಮಹಾನಗರ ಪಾಲಿಕೆಯ ಮುಂದುಗಡೆ ನಿಂತು ಪೋಸ್ಟರ್ ಹಿಡಿದು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಒಂಟಿಯಾಗಿ ಪೋಸ್ಟರ್ ಹಿಡಿದು ರಸ್ತೆಯಲ್ಲಿ ‘ಸುರಕ್ಷಾ ಬಂಧನ’ಕ್ಕೆ ಆಗ್ರಹಿಸುತ್ತಿದ್ದಾರೆ. ತನ್ನ ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಎದುರು ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿರುವ ಈ ಬಾಲಕನ ಹೆಸರು ಲಿಖಿತ್ ರೈ. ಇತ್ತೀಚೆಗೆ ಆತನ ಸ್ನೇಹಿತ ಅತೀಶ್‌ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. […]

ಪರ್ಕಳ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಹದಿನೈದು ದಿನ ಗಡುವು: ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಪ್ರತಿಭಟನೆ

ಪರ್ಕಳ: ಭಾನುವಾರದಂದು ಪರ್ಕಳದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಧರಣಿ ನಡೆಯಿತು. ಪರ್ಕಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಾನ‌ ಮನಸ್ಕರು ಮತ್ತು ಪರ್ಕಳ ನಿವಾಸಿಗಳು ಪಾಲ್ಗೊಂಡರು.   ಧರಣಿಯ ನೇತೃತ್ವ ವಹಿಸಿದ ಡಾ.ಪಿ.ವಿ.ಭಂಡಾರಿ ಮಾತನಾಡಿ ಶಾಸಕರು, ಸಂಸದರು ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಅಧ್ಯಯನಕ್ಕಾಗಿ ಶಾಸಕರೆಲ್ಲ ಲೇಹ್ ಲಡಾಕ್ ಗೆ ಹೋಗಿದ್ದಾರೆ. ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ, ನಮ್ಮ ಪರ್ಕಳ ರಸ್ತೆಗೆ ಬಂದರೆ ಸಾಕು, ನಿಮಗೆ ಇಲ್ಲಿಯೇ ಲೇಹ್ ಲಡಾಕ್ ನ […]