ಕೊಪ್ಪ: ಅಂಚೆ ಕಚೇರಿ ನೌಕರ ಸದಾಶಿವ ಬಂಗೇರರವರಿಗೆ ಬೀಳ್ಕೊಡುಗೆ
ಕೊಪ್ಪ: ಕೆ.ಬಿ ಸದಾಶಿವ ಬಂಗೇರ ಇವರು ಅಂಚೆ ನೌಕರರಾಗಿ 42 ವರ್ಷ ಕೊಪ್ಪ ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ, ಜುಲೈ 30 ರಂದು ನಿವೃತ್ತಿ ಹೊಂದಿದ್ದು, ಈ ಸಂದರ್ಭ ಅವರನ್ನು ಕೊಪ್ಪ ಪ್ರಧಾನ ಅಂಚೆ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಚೆ ಕಚೇರಿಯ ಪಾಲಕರಾದ ಶ್ರೀಮತಿ ಸುಮನ, ಅನುರಾಧಾ, ಅಕೌಂಟೆಂಟ್ ವಾಸುದೇವ ಹಾಗೂ ದಿನೇಶ್, ಪಣಿಕುಮಾರ್ ಹಾಗೂ ಅಂಚೆ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸದಾಶಿವ ಬಂಗೇರರವರ ಪತ್ನಿ ಮಲ್ಲಿಕಾ, ಮಕ್ಕಳಾದ ಸ್ವರೂಪ್, ಸ್ವಾತಿ, ಪೂರ್ಣಿಮಾ, ಮೊಮ್ಮಗು ರಾಶ್ವಿ […]
ಆಗಸ್ಟ್ 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಖರೀದಿಗೆ ಅವಕಾಶ
ಉಡುಪಿ: ಅಂಚೆ ಇಲಾಖೆಯ ವತಿಯಿಂದ ಹರ್-ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ರಾಷ್ಟ್ರೀಯ ಧ್ವಜವನ್ನು ಖರೀದಿಸಲು ಅನುಕೂಲವಾಗುವಂತೆ ಆಗಸ್ಟ್ 9 ಹಾಗೂ 14 ರಂದು ಉಡುಪಿ ವಿಭಾಗದ ಎಲ್ಲಾ ಇಲಾಖಾ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸಲಿದ್ದು, ಈ ಎರಡೂ ದಿನಗಳಲ್ಲಿ ತಿರಂಗಾ ವಿತರಣೆ ಮಾತ್ರ ನಡೆಯಲಿದ್ದು, ಇತರ ಯಾವುದೇ ವ್ಯವಹಾರಗಳು ಇರುವುದಿಲ್ಲ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಸ್ವಾತಂತ್ರ್ಯ ದಿನದವರೆಗೆ ರಜಾದಿನಗಳಲ್ಲೂ ತೆರೆದಿರಲಿವೆ ಅಂಚೆ ಕಚೇರಿಗಳು: ಹರ್ ಘರ್ ತಿರಂಗ ಅಭಿಯಾನಕ್ಕಾಗಿ ವ್ಯವಸ್ಥೆ
ನವದೆಹಲಿ: ಹರ್ ಘರ್ ತಿರಂಗ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲವಾಗುವಂತೆ ದೇಶದಾದ್ಯಂತ ಎಲ್ಲಾ ಅಂಚೆ ಕಛೇರಿಗಳು ಸ್ವಾತಂತ್ರ್ಯ ದಿನದ ಮೊದಲಿನ ಎಲ್ಲಾ ರಜಾದಿನಗಳಲ್ಲಿ ತೆರೆದಿರುತ್ತವೆ. ಈ ಬಗ್ಗೆ ಸಂಪರ್ಕ ಸಚಿವಾಲಯವು ಪ್ರಕಟಣೆ ಹೊರಡಿಸಿದ್ದು, ಈ ತಿಂಗಳ 7, 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ಕನಿಷ್ಠ ಒಂದು ಕೌಂಟರ್ ಮೂಲಕ ರಾಷ್ಟ್ರಧ್ವಜಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ. ಎಲ್ಲಾ ವಿತರಣಾ ಅಂಚೆ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜಗಳನ್ನು ತಲುಪಿಸಲು […]
ಉಡುಪಿ ಅಂಚೆ ವಿಭಾಗದ ಅಂಚೆ ಕಚೇರಿಗಳಲ್ಲಿ ರೆವಿನ್ಯೂ ಸ್ಟ್ಯಾಂಪ್‌ಗಳು ಲಭ್ಯ
ಉಡುಪಿ: ಅಂಚೆ ಇಲಾಖೆಯ ವತಿಯಿಂದ ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿರುವ ರೆವಿನ್ಯೂ ಸ್ಟ್ಯಾಂಪ್‌ಗಳು ಉಡುಪಿ ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಖರೀದಿಗೆ ಲಭ್ಯವಿರುವುದಾಗಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವೃತ್ತ ಅಂಚೆ ಅಧೀಕ್ಷಕರ ಒಕ್ಕೂಟ: ರಾಜ್ಯಧ್ಯಕ್ಷರಾಗಿ ನವೀನ್ ಚಂದರ್ ಮೂಳೂರು ಆಯ್ಕೆ
ಬೆಂಗಳೂರು: ಇಲ್ಲಿ ಜುಲೈ 16 ರಂದು ನಡೆದ ಒಕ್ಕೂಟದ ದ್ವೈವಾಷಿ೯ಕ ಅಧಿವೇಶನದಲ್ಲಿ ನವೀನ್ ಚಂದರ್ ಮೂಳೂರು ಅವಿರೋಧವಾಗಿ ಆಯ್ಕೆಯಾದರು. ಇವರು ಉಡುಪಿ ಅಂಚೆ ವಿಭಾಗದಲ್ಲಿ ಅಂಚೆ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಹಿಂದೆ ದೆಹಲಿಯ ಡೈರೆಕ್ಟರೇಟ್ ನಲ್ಲಿ ಸಹಾಯಕ ಅಂಚೆ ನಿರ್ದೇಶಕರಾಗಿ ಮತ್ತು ಶಿವಮೊಗ್ಗದಲ್ಲಿ ಅಂಚೆ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಸಹಾಯಕ ಅಧೀಕ್ಷಕರಾಗಿದ್ದಾಗ ಅಂಚೆ ನಿರೀಕ್ಷರ ಮತ್ತು ಸಹಾಯಕ ಅಧೀಕ್ಷಕರ ಕರ್ನಾಟಕ ವ್ಯತ್ತದ ಒಕ್ಕೂಟದ ಕಾರ್ಯದರ್ಶಿಯಾಗಿ, ರಾಜ್ಯಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಮಟ್ಟದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ […]