ಶಿರ್ವ: ಕೋಳಿ ಅಂಕ ಅಡ್ಡೆಗೆ ಪೊಲೀಸ್ ದಾಳಿ; ಇಬ್ಬರ ಬಂಧನ, ಹಲವಾರು ವಾಹನ ವಶ

ಉಡುಪಿ: ಕೋವಿಡ್ ಲಾಕ್ ಡೌನ್ ಮಧ್ಯೆಯೂ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರು‌ ಬಂಧಿಸಿ, ಹಲವು ವಾಹನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಶಿರ್ವ ಸೊರ್ಪು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಬಳಿ ಮಂಗಳವಾರ ಸಂಜೆ ನಡೆದಿದೆ. ಪೊಲೀಸ್ ದಾಳಿ‌ ವೇಳೆ ಇತರೆ 6 ಮಂದಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಮೂಡುಬೆಳ್ಳೆ ಕಂಡಿಗ ನಿವಾಸಿ ಜಯ ಪೂಜಾರಿ (66) ಮತ್ತು ಪ್ರಸಾದ್‌ ಕುತ್ಯಾರ್‌ (38) ಎಂದು ಗುರುತಿಸಲಾಗಿದೆ. ಸುಂದರ ಆತ್ರಾಡಿ, ಸೂರ್ಯ ಎಡ್ಮೇರು, […]