ಮಾಹೆ ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ ವತಿಯಿಂದ ಬಹುಭಾಷಾ ಕವಿಗೋಷ್ಠಿ ಆಯೋಜನೆ

ಮಣಿಪಾಲ: ಮಹಾಕವಿ ಸುಬ್ರಹ್ಮಣ್ಯ ಭಾರತಿಯವರ ಜಯಂತಿಯ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ‘ಭಾರತೀಯ ಭಾಷಾ ಉತ್ಸವ್‌’ನ ಅಂಗವಾಗಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ನ ಪ್ರಸಾರಾಂಗ ಘಟಕವಾದ ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ ಪ್ರ-ದೇಶ ಭಾಷಾ ಕವಿಗೋಷ್ಠಿ ‘ಸುಮಧುರ ಭಾಷಿಣೀಂ’ ಅನ್ನು ಡಿ. 12ರಂದು ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಆಯೋಜಿಸಿಸಲಾಗಿತ್ತು. ಈ ಕವಿಗೋಷ್ಠಿಯಲ್ಲಿ ಸುಜಯೀಂದ್ರ ಹಂದೆ ಅವರು ಕುಂದಗನ್ನಡವನ್ನು, ಅನುಬೆಳ್ಳೆ , ವಾಸಂತಿ ಅಂಬಲಪಾಡಿ, ಪೂರ್ಣಿಮಾ ಜನಾರ್ದನ್‌ ತುಳುವಿನ ವಿವಿಧ ಪ್ರಭೇದಗಳನ್ನು, ಯೂಕೂಬ್‌ ಖಾದರ್‌ ಬ್ಯಾರಿಭಾಷೆಯನ್ನು, ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಕೊಂಕಣಿಯನ್ನು […]