ಶಿಕ್ಷಕರ ದಿನಾಚರಣೆಯಂದು ಪಿಎಂ-ಶ್ರೀ ಶಾಲಾ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ
ನವದೆಹಲಿ: ಶಿಕ್ಷಕರ ದಿನಾಚರಣೆಯಂದು ಭಾರತದಾದ್ಯಂತದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಯೋಜನೆಗೆ ಪ್ರಧಾನಿ ಮೋದಿ ಶ್ರೀ ಕಾರ ನೀಡಿದ್ದಾರೆ. ಸೋಮವಾರ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, “ಇಂದು, ಶಿಕ್ಷಕರ ದಿನದಂದು ನಾನು ಹೊಸ ಉಪಕ್ರಮವನ್ನು ಘೋಷಿಸಲು ಸಂತೋಷಪಡುತ್ತೇನೆ. ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ಭಾರತದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣವಾಗಲಿದೆ. ಇವುಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪೂರ್ಣ ಚೈತನ್ಯವನ್ನು ಆವರಿಸುವ ಮಾದರಿ ಶಾಲೆಗಳಾಗುತ್ತವೆ” […]