5 ಕೋಟಿ ಯೂನಿಟ್ಗಳಷ್ಟು ರಕ್ತದ ಅವಶ್ಯಕತೆ ಇರುವ ಭಾರತದಲ್ಲಿ ಪೂರೈಕೆಯಾಗುವುದು 50% ಮಾತ್ರ
ಆರೋಗ್ಯ ಸೇವೆಯಲ್ಲಿ ರಕ್ತ ವರ್ಗಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ತದ ಕೊರತೆ ಕಾಡುತ್ತದೆ. ಭಾರತಕ್ಕೆ ಹಲವಾರು ವೈದ್ಯಕೀಯ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಸುಮಾರು 5 ಕೋಟಿ ಯೂನಿಟ್ಗಳಷ್ಟು ರಕ್ತದ ಬೃಹತ್ ಅವಶ್ಯಕತೆ ಇರುತ್ತದೆ. ಪೂರೈಕೆ ಮತ್ತು ಬೇಡಿಕೆಗಳ ನಡುವಿನ ಅಂತರ ಬಹುತೇಕ ಅರ್ಧದಷ್ಟು ಇದೆ. ವಾಸ್ತವವಾಗಿ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ದೇಶದ ಯಾವುದೋ ಒಂದು ಸ್ಥಳದಲ್ಲಿ ರಕ್ತ ವರ್ಗಾವಣೆಯ ಅವಶ್ಯಕತೆ ಇರುತ್ತದೆ. ಅಂದರೆ ಪ್ರತಿ ದಿನ 35,000ಕ್ಕೂ ಹೆಚ್ಚಿನ ರಕ್ತದಾನಗಳ ಅಗತ್ಯವಿರುತ್ತದೆ ಎಂದು […]