ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಸಸಿಗಳ ದತ್ತು ಸ್ವೀಕಾರ ಕಾರ್ಯಕ್ರಮ; ಪ್ರಕೃತಿಯನ್ನು ಪ್ರೀತಿಸಿ-ಗುರುರಾಜ್ ಸನಿಲ್

ಶಿರ್ವ: ಮನುಷ್ಯರಂತೆಯೇ ಪ್ರಕೃತಿಯಲ್ಲಿರುವ ಸಕಲ ಜೀವಸಂಕುಲಗಳಿಗೂ ಭಾವನೆಗಳಿವೆ. ಇವು ಪ್ರಕೃತಿಯ ಸಮತೋಲನತೆಗೂ ಅವಶ್ಯಕ. ಆದ್ದರಿಂದ ನಾವೆಲ್ಲರೂ ಪ್ರಕೃತಿಯನ್ನು ಪ್ರೀತಿಸಬೇಕು ಎಂದು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್‍ ಹೇಳಿದರು. ಶಿರ್ವ ಸಂತ ಮೇರಿ ಕಾಲೇಜಿನ ಮಾನವಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಘಟಕವು ಉಡುಪಿಯ ನಮ್ಮ ಮನೆ ನಮ್ಮ ಮರ ಸಂಸ್ಥೆಯ ಸಹಯೋಗದೊಂದಿಗೆ ರೈತರ ದಿನದ ಅಂಗವಾಗಿ ಇಂದು ಕಾಲೇಜಿನಲ್ಲಿ ಆಯೋಜಿಸಿದ ‘ಸಸಿಗಳ ದತ್ತು ಸ್ವೀಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಮನೆ, ನಮ್ಮ ಮರ ಸಂಘಟನೆಯ […]