ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರುಗಳ ವೈಶಿಷ್ಟ್ಯಗಳು ಹಲವು

ಹೊಸ ಇನ್ನೋವಾ ಹೈಕ್ರಾಸ್ ಇತ್ತೀಚಿನ 2.0ಲೀ ಟಿ.ಎನ್.ಜಿ.ಎ ಪೆಟ್ರೋಲ್ ಎಂಜಿನ್ ಮತ್ತು ಅತ್ಯಾಧುನಿಕ 5 ನೇ ತಲೆಮಾರಿನ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನದಿಂದ ಮಾಡಲ್ಪಟ್ಟಿದೆ. ಬೆಲೆ ಟೊಯೋಟಾ ಇನ್ನೋವಾ ಹೈಕ್ರಾಸ್ ಬೆಲೆಯು ಆಯ್ಕೆಮಾಡಿದ ವೇರಿಯಂಟ್ ಅವಲಂಬಿಸಿ ರೂ 18.30 ಲಕ್ಷದಿಂದ ರೂ 28.97 ಲಕ್ಷದವರೆಗೆ ಇರುತ್ತದೆ. ಇನ್ನೋವಾ ಹೈಕ್ರಾಸ್ ಟಾಪ್ ಮಾಡೆಲ್ ಪೆಟ್ರೋಲ್ ಬೆಲೆ ರೂ 19.20 ಲಕ್ಷ. ಇನ್ನೋವಾ ಹೈಕ್ರಾಸ್ ಮಾದರಿಯ ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಬೆಲೆ ರೂ 24.01 ಲಕ್ಷ. ಇನ್ನೋವಾ […]

ಉಡುಪಿ: ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳ್ಳತನ

ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳವು ಮಾಡಿರುವ ಘಟನೆ ಡಿ.1ರಂದು ಬೆಳಗಿನ ಜಾವ ಅಂಬಲಪಾಡಿ ಜಂಕ್ಷನ್ ಬಳಿ ನಡೆದಿದೆ. ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳು ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಲಾರಿಯಿಂದ 20 ಲೀಟರ್ ಡಿಸೇಲ್ ಕಳವು ಮಾಡಿದ್ದಾರೆ ಎನ್ನಲಾಗಿದೆ. ಕಳವಾದ ಪೆಟ್ರೋಲ್ ನ ಮೌಲ್ಯ 1745ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನಲ್ಲಿ ಇಂಧನ ಬೆಲೆ ವಿರುದ್ದ ಪ್ರತಿಭಟನೆ: ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ದ ಪ್ರಕರಣ ದಾಖಲು

ಚೆನ್ನೈ: ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಅನುಮತಿ ಪಡೆಯದೆ ರಾಜ್ಯ ಸಚಿವಾಲಯದತ್ತ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕೆಂದು ರಾಜು ಬಿಜೆಪಿ ಒತ್ತಾಯಿಸುತ್ತಿದೆ. ಅಣ್ಣಾಮಲೈ ಮತ್ತು 5,000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ತಮಿಳುನಾಡು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 31 ರಂದು ಅಣ್ಣಾಮಲೈ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾ ರಾಜ್ಯದ […]

ಏರುತ್ತಿರುವ ಇಂಧನ ಬೆಲೆಗೆ ಕಡಿವಾಣ: ಮೆಥನಾಲ್ ಮಿಶ್ರಿತ ಪೆಟ್ರೋಲ್ ಎಂ 15 ಬಿಡುಗಡೆ

ದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಮಾದರಿಯ ಪೆಟ್ರೋಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿರುವ ಹೊಸ ಮಾದರಿಯ ಈ ಪೆಟ್ರೋಲ್ ನಿಂದಾಗಿ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಮೂಲಕ ಪೈಲಟ್ ಯೋಜನೆಯಾಗಿ ಶೇ. 15 ರಷ್ಟು ಮೆಥೆನಾಲ್ ಮಿಶ್ರಣವನ್ನು ಹೊಂದಿರುವ ಪೆಟ್ರೋಲ್ ‘ಎಂ 15’ ಅನ್ನು ಬಿಡುಗಡೆಮಾಡಲಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಶನಿವಾರ […]

ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ: ಬೆಂಗಳೂರಿನಲ್ಲಿ ₹105ರ ಗಡಿ ದಾಟಿದ ಪೆಟ್ರೋಲ್

ನವದೆಹಲಿ: ದೇಶಾದ್ಯಂತ ಇಂಧನ ಬೆಲೆ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್ ದರ 36 ಪೈಸೆ ಮತ್ತು ಡೀಸೆಲ್ ದರ 17 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.105ರ ಗಡಿ ದಾಟಿದಂತಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಗುರುವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ […]