ಕುಂದಾಪುರ: ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ಕುಂದಾಪುರ: ಇಲ್ಲಿನ ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಪರೀಕ್ಷಾ ಸಿದ್ಧತೆಯ ಉಪನ್ಯಾಸ ಕಾರ್ಯಾಗಾರವು ನವೆಂಬರ್ 8 ರಂದು ನಡೆಯಿತು. ಈ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ಉಪನ್ಯಾಸಕ ಸತೀಶ ಆರ್ ಮೈಸೂರು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಇಂದಿನ ಯುವಕರೇ ನಾಳಿನ ನೇತಾರರು. ನೀವು ಈ ದೇಶವನ್ನು ಮುನ್ನೆಡೆಸಿ ರಕ್ಷಿಸುವವರು. ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ […]
ಡಿ.ಎ ಜೋಸೆಫ್ ರಿಂದ ವ್ಯಕ್ತಿತ್ವ ವಿಕಸನ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ
ಉಡುಪಿ: ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಶ್ರೀ ಕೃಷ್ಣ ಸೇವಾ ಬಳಗದ ವತಿಯಿಂದ ಶ್ರೀ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪಾಂಡಿಚೇರಿಯ ಋಷಿ ಧರ್ಮ ಫೌಂಡೇಶನಿನ ಅಧ್ಯಕ್ಷರಾದ ಪ್ರವಚನ ಭಾಸ್ಕರ ಶ್ರೀ ಡಿ.ಎ ಜೋಸೆಫ್ ಇವರಿಂದ ವ್ಯಕ್ತಿತ್ವ ವಿಕಸನದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.