ನಿಟ್ಟೆ: ಸೆಲ್ಫಿ ತೆಗೆಯಲು ಹೋಗಿ ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ ಕೊಚ್ಚಿ ಹೋದ ಯುವಕ

ಕಾರ್ಕಳ: ಇಲ್ಲಿನ ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ  ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಗುರುವಾರ ನಡೆದಿದೆ. ಬೋಳ ಕೃಷ್ಣಮೂಲ್ಯರ ಮಗ ಎಲೆಕ್ಟ್ರೀಷಿಯನ್‌ ಸುದೇಶ್‌ ಬೊಳ (19) ನೀರು ಪಾಲಾದ ಯುವಕ. ಏನಾಗಿತ್ತು? ನಿಟ್ಟೆ ಅರ್ಬಿ ಫಾಲ್ಸ್ ಗೆ ಗುರುವಾರ ನಾಲ್ವರು ಗೆಳೆಯರು ತೆರಳಿ ಮೈಮರೆತು  ಜಲಪಾತದ ಬದಿಯಲ್ಲಿ ನಿಂತು ಸೆಲ್ಫಿ  ಕ್ಲಿಕ್ಕಿಸುವ ವೇಳೆ ಈ ಘಟನೆ ಸಂಭವಿಸಿದೆ.  ನಾಲ್ವರು ಗೆಳೆಯರ ಪೈಕಿ ಸುದೇಶ್‌ ಹಾಗೂ ಭರತ್‌ ಕಾಲು ಜಾರಿ ಜಲಪಾತಕ್ಕೆ  ಬಿದ್ದಿದ್ದಾರೆ. ಆದರೆ ಭರತ್‌ ಈಜು ಗೊತ್ತಿದ್ದರಿಂದ ದಡ […]