ಇಂದು ಪೆರ್ಡೂರಿನಲ್ಲಿ ಬೊಳ್ಳಿಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ

ಪೆರ್ಡೂರು: ಶ್ರೀ ಅನಂತಪದ್ಮನಾಭ ಜಾತ್ರಾ ಮಹೋತ್ಸವದ ಪ್ರಯುಕ್ತ ಗೆಳೆಯರ ಬಳಗ (ರಿ) ಪೆರ್ಡೂರು ಅರ್ಪಿಸುವ 13 ನೇ ವರ್ಷದ ಕಾರ್ಯಕ್ರಮ ಶ್ರೀ ಶಿರಿಡಿ ಸಾಯಿಬಾಬ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಮಂಗಳೂರು ಇವರಿಂದ ಮಾ.16 ರಂದು ಶನಿವಾರ ಪೆರ್ಡೂರಿನಲ್ಲಿ ಬೊಳ್ಳಿಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ ನಡೆಯಲಿದೆ.

ಪೆರ್ಡೂರು: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ಪೆರ್ಡೂರು: ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಹೆಣ್ಣು ಚಿರತೆಯೊಂದನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೆರ್ಡೂರು ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ಮೂರು ದಿನಗಳ ಹಿಂದಷ್ಟೇ ಚಿರತೆಯ ಮರಿಯೊಂದನ್ನು ಹಿಡಿದು ಆಗುಂಬೆ ಕಾಡಿನಲ್ಲಿ ಬಿಡಲಾಗಿತ್ತು. ಅದರ ತಾಯಿ ತನ್ನ ಮರಿಯನ್ನರಸಿಕೊಂಡು ಪೆರ್ಡೂರು ಪರಿಸರದಲ್ಲಿ ಅಡ್ಡಾಡುತ್ತಿತ್ತು. ಇದರಿಂದಾಗಿ ಇಲ್ಲಿನ ಪರಿಸರದ ಜನರಲ್ಲಿ ಆತಂಕ ಮನೆ ಮಾಡಿತ್ತು. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು. ಇದೀಗ ಚಿರತೆಯು ಬೋನಿನೊಗಳೆ ಬಿದ್ದಿದ್ದು, […]

ಪೆರ್ಡೂರು: ಟಿಪ್ಪರ್ ಡಿಕ್ಕಿ ಹೊಡೆದು ವೃದ್ಧ ಸ್ಥಳದಲ್ಲೇ ಸಾವು

ಪೆರ್ಡೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರಿಗೆ ಟಿಪ್ಪರ್ ಡಿಕ್ಕಿ ಹೊಡೆದು‌‌ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪೆರ್ಡೂರು ಮೇಲ್ಪೇಟೆಯ ಬಿಎಮ್ ಸ್ಕೂಲ್ ಎದುರು ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಅಲಂಕಾರು ನಿವಾಸಿ 70 ವರ್ಷದ ಮಂಜಯ್ಯ‌ ಶೆಟ್ಟಿ ಎಂದು ಗುರುತಿಸಲಾಗಿದೆ. ಪೆರ್ಡೂರಿನಿಂದ ಹಿರಿಯಡಕ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಒಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜಯ್ಯ ಶೆಟ್ಟಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಬಿದ್ದ ಮಂಜಯ್ಯ ಶೆಟ್ಟಿ ಅವರ ತಲೆ ಮೇಲೆ ಟಿಪ್ಪರ್ ನ ಚಕ್ರ […]