ಪೆರ್ಡೂರಿನ ಶ್ರೀಶಾನ್ ಶೆಟ್ಟಿ ಸಾವು ಪ್ರಕರಣ: ಸಮಗ್ರ ತನಿಖೆಗೆ ಪೋಷಕರ ಮನವಿ!

ಉಡುಪಿ: ಪೆರ್ಡೂರು ಕುಕ್ಕುಂಜಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ನಾಪತ್ತೆ ಹಾಗೂ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಂಶಯ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ತಂದೆ ಕರುಣಾಕರ ಶೆಟ್ಟಿ ದೂರು ನೀಡಿದ್ದಾರೆ. ಮಗನ ಜತೆಗೆ ಹೊಳೆ ಬದಿಗೆ ಹೋಗಿದ್ದ ನವೀನ್ (25) ಮೇಲೆ ಸಂಶಯ ವ್ಯಕ್ತವಾಗಿದೆ. ನ.10ರಂದು ಶ್ರೀಶಾನ್ ತಂದೆಯೊಂದಿಗೆ ಪೆರ್ಡೂರು ಪೇಟೆಗೆ ಬಂದಿದ್ದು ಆ ಬಳಿಕ ಅಜ್ಜಿಯ ಮನೆಗೆ ಹೋಗಿ ಬರುವೆನೆಂದು ತಿಳಿಸಿ ತಂದೆಯ ಸ್ಕೂಟರ್ ತೆಗೆದುಕೊಂಡು ಹೋಗಿದ್ದನು. ಅಲ್ಲಿ ನೆರೆಮನೆಯ ಯುವಕ ನವೀನ್ ಎಂಬವನೊಂದಿಗೆ […]