ಮಣಿಪಾಲ- ಪೆರಂಪಳ್ಳಿ- ಶೀಂಬ್ರ ರಸ್ತೆಗೆ ಜಾಗದ ಸಮಸ್ಯೆ: ಶಾಸಕ ರಘುಪತಿ ಭಟ್ ರಿಂದ ಸ್ಥಳೀಯರ ಮನವೊಲಿಕೆ

ಉಡುಪಿ: ಇಲ್ಲಿನ ಮಣಿಪಾಲ – ಪೆರಂಪಳ್ಳಿ – ಶೀಂಬ್ರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ರೂ. 7.00 ಕೋಟಿ ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ ಪೂರ್ಣಗೊಂಡಿರುತ್ತದೆ. ಈ ರಸ್ತೆ ಹಾದುಹೋಗುವ ಪೆರಂಪಳ್ಳಿಯ ಶೀಂಬ್ರ ಬ್ರಿಡ್ಜ್ ಬಳಿ ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಸಮಸ್ಯೆ ಉಂಟಾಗಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸ್ಥಳೀಯರ ಮನವಿಯಂತೆ ಶಾಸಕರು ಶನಿವಾರದಂದು ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ. ಹಾಗೂ […]
ಪೆರಂಪಳ್ಳಿ: ನ.19 ರಂದು ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನ

ಪೆರಂಪಳ್ಳಿ: ಇಲ್ಲಿನ ಯುವಕ ಮಂಡಲದ ಆಶ್ರಯದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ, ಸ್ವರಾಜ್ ಶೆಟ್ಟಿ ಅಭಿನಯದ ಅತ್ಯಮೋಘ ನಾಟಕ ಶಿವದೂತೆ ಗುಳಿಗೆ ನ. 19 ರಂದು ರಾತ್ರಿ 8 ಗಂಟೆಗೆ ಯುವಕ ಮಂಡಲ ವಠಾರದಲ್ಲಿ ನಡೆಯಲಿರುವುದು.
ಪೆರಂಪಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರ

ಪೆರಂಪಳ್ಳಿ: ಯುವಕ ಮಂಡಲ ಪೆರಂಪಳ್ಳಿ, ನೇತ್ರ ವಿಭಾಗ ಕೆಎಂಸಿ ಮಣಿಪಾಲ ಹಾಗೂ ಐ-ನೀಡ್ಸ್ ಆಪ್ಟಿಕಲ್ಸ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಯುವಕ ಮಂಡಲದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆಎಂಸಿಯ ನೇತ್ರ ತಜ್ಞ ಡಾ. ಆಶ್ರಿತ್ ಕಾಮತ್, ಡಾ ನೀಲಾಯಿ ರೆಡ್ಡಿ, ಐ-ನೀಡ್ಸ್ ಆಪ್ಟಿಕಲ್ಸ್ ನ ಗಜಾನನ ನಾಯಕ್, ಗ್ರಾಮ ವನ್ ಕೇಂದ್ರದ ಇಮ್ತಿಯಾಜ್, ಯುವಕ ಮಂಡಲದ ಅಧ್ಯಕ್ಷ ಡೆನಿಸ್ ಪ್ರಸನ್ನ, ಗೌರವಾಧ್ಯಕ್ಶ ಹರಿಕೃಷಣ […]
ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್: ಶಾಲಾ ಮಕ್ಕಳಿಂದ ಮಳೆಕಾಡುಗಳ ಅಧ್ಯಯನ

ಉಡುಪಿ: ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್ ಉಡುಪಿ ಇದರ ವತಿಯಿಂದ ಇಂಟಿಗ್ರೇಟೆಡ್ ಇಂಗ್ಲೀಷ್ ಎಂಬ ವಿಷಯಾಧಾರಿತ ಕಲಿಕೆಯ ಒಂದು ಭಾಗವಾಗಿ ‘ಅತೀಂದ್ರೀಯ ಮಳೆಕಾಡು’ ಎಂಬ ಶೀರ್ಷಿಕೆಯಡಿ ಮಕ್ಕಳಿಗೆ ಮಳೆಕಾಡುಗಳ ಬಗ್ಗೆ ಅಧ್ಯಯನವು ನಿರಂತರವಾಗಿ ಒಂದು ತಿಂಗಳ ಕಾಲ ನಡೆಯಿತು. ಇದರ ಅಂತಿಮ ಹಂತವಾಗಿ ನಡೆದ ಸಭಾ ಕಾರ್ಯಕ್ರಮ ಶಾಲೆಯ ವಾಚನಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಅರಣ್ಯ ಅಧಿಕಾರಿಗ ಕ್ಲಿಫ್ಫರ್ಡ್ ಲೋಬೋ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಡುಗಳು ಪ್ರಕೃತಿಯ ಅಮೂಲ್ಯ ಕೊಡುಗೆ.ಅವುಗಳನ್ನು ಸಂರಕ್ಷಿಸಬೇಕು.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ […]
ಉಡುಪಿ: ಪೊದಾರ್ ಶಾಲೆಯಲ್ಲಿ ಮಕ್ಕಳ ಸಂಸತ್ತು ಉದ್ಘಾಟನೆ

ಉಡುಪಿ: ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಸಂಸತ್ತು ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೂರ್ಣಪ್ರಜ್ಞ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ರಾವ್ ಭಾಗವಹಿಸಿ ಮಾತನಾಡಿ, ಮಕ್ಕಳೇ ಮುಂದಿನ ಶಕ್ತಿ. ಆದ್ದರಿಂದ ಮಕ್ಕಳು ಶಿಸ್ತಿನ ಜೀವನ ನಡೆಸಬೇಕು ಎಂದರು. ಶಾಲಾ ಪ್ರಾಂಶುಪಾಲರಾದ ಎಂ.ಎಸ್. ಹೀರೇಮಠ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಾಲಾನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದರು. ಶಾಲಾ ನಾಯಕನಾಗಿ ಏಳನೇ ತರಗತಿ ವಿದ್ಯಾರ್ಥಿ ದಕ್ಷ್‍ಭಂಡಾರಿ ಹಾಗೂ ಶಾಲಾನಾಯಕಿಯಾಗಿ ದಿಯಾ ಕಾರ್ಣಿಕ್ ಆಯ್ಕೆಯಾದರು. ಶಿಕ್ಷಕಿ ವೇದಾವತಿ […]