ಪೇಜಾವರ ಶ್ರೀಪಾದರ ಬಗ್ಗೆ ಅಮೀನ್ ಮಟ್ಟು ಹೇಳಿಕೆ ಖಂಡನೀಯ :ಕೋಟ

ಉಡುಪಿ: ಪೇಜಾವರ ಶ್ರೀಪಾದರ ಬಗ್ಗೆ ಚಿಂತಕ ದಿನೇಶ್ ಅಮೀನ್ ಮಟ್ಟು ಆಡಿದ ಅವಹೇಳನಕಾರಿ ಮಾತಿನಿಂದ ಸಮಸ್ತ ಹಿಂದೂ ಧರ್ಮಕ್ಕೆ ನೋವಾಗಿದೆ. ಮಟ್ಟು ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಚಿಂತಕ ದಿನೇಶ್ ಅಮೀನ್ ಮಟ್ಟು ‘ಪೇಜಾವರ ಶ್ರೀಗಳಿಗೆ ಅರಳುಮರಳು’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿದ ಕೋಟ, ಅಖಂಡ ಹಿಂದೂ ಧರ್ಮದ ಶ್ರೇಷ್ಠ ಸಂನ್ಯಾಸಿ ಪೇಜಾವರ […]