ಪಿಡಿಎಫ್ ಓದಿ ಹೇಳಲಿರುವ Google Chrome: ಹೊಸ ಅಪ್ಡೇಟ್ ಇಮೇಜ್ ಟು ಟೆಕ್ಸ್ಟ್ ಫೀಚರ್ ಕೂಡ ಶೀಘ್ರ ಲಭ್ಯ

ಸ್ಯಾನ್ ಫ್ರಾನ್ಸಿಸ್ಕೋ :ಕ್ರೋಮ್ ಆಪರೇಟಿಂಗ್ ಸಿಸ್ಟಮ್ ಬಳಸುವಾಗ Chrome ಬ್ರೌಸರ್ನಲ್ಲಿ ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಪಠ್ಯವಾಗಿ ಪರಿವರ್ತಿಸುವ ವೈಶಿಷ್ಟ್ಯಗಳನ್ನು ಕಂಪನಿ ಸೇರಿಸುತ್ತಿದೆ. ಸ್ಕ್ರೀನ್ ರೀಡರ್ ಮೇಲೆ ಅವಲಂಬಿತವಾಗಿರುವ ಅಂಧರು ಅಥವಾ ಕಡಿಮೆ ದೃಷ್ಟಿ ಹೊಂದಿರುವ ಜನ ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಓದಲು ಅನುಕೂಲವಾಗುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಕ್ರೋಮ್ ಬ್ರೌಸರ್ ಬಿಲ್ಟ್ ಇನ್ ವೈಶಿಷ್ಟ್ಯವನ್ನು ತಯಾರಿಸಲಿದೆ ಎಂದು ಗೂಗಲ್ ಹೇಳಿದೆ.ದೃಷ್ಟಿಮಾಂದ್ಯರು ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಓದಲು ಸಾಧ್ಯವಾಗುವಂತೆ ಗೂಗಲ್ ಕ್ರೋಮ್ ಬ್ರೌಸರ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಅಂದರೆ ಸ್ಕ್ರೀನ್ ರೀಡರ್ ಬಳಕೆದಾರರು […]