ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕ: ರೈಲ್ವೆ ಪೊಲೀಸರಿಂದ ರಕ್ಷಣೆ.

ಉಡುಪಿ: ಚಲಿಸುತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕರೊಬ್ಬರನ್ನು ಚುರುಕಾಗಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ರವಿವಾರ ನಡೆದಿದೆ. ಸಂಜೆ 7:00 ಸುಮಾರಿಗೆ ಪ್ಲಾಟ್‌ಪಾರಂ ನಂ.1ರಿಂದ ಹೊರಟ ಕೊಂಕಣ ಕನ್ಯಾ ಎಕ್ಸ್‌ಪ್ರೆಸ್ ರೈಲು ಚಲಿಸುತಿದ್ದಂತೆ ಪ್ರಯಾಣಿಕರೊಬ್ಬರು ಇಳಿಯಲು ಪ್ರಯತ್ನಿಸಿದ್ದರು. ಕಾಲು ಜಾರಿ ಅವರು ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಬಿದ್ದರು. ಆಗ ಅಲ್ಲೇ ಫ್ಲಾಟ್‌ಫಾರಂ ನಂ1ರ ಬಳಿ ನಿಂತಿದ್ದ ರೈಲ್ವೆ ಪೊಲೀಸ್ ಕಾನ್‌ಸ್ಟೇಬರ್ ಕಪಿಲ್ ಸಯಾನಿ ಹಾಗೂ ಹೆಡ್ ಕಾನ್‌ಸ್ಟೇಬಲ್ […]