“ಪಶ್ಚಿಮ” ಅನ್ನೋ ಭರವಸೆಯ ಆಶ್ರಯಧಾಮ: ನಿರಾಶ್ರಿತರಿಗೆ ಬೆಳಕಾದ ಕುಡ್ಲದ ದಂಪತಿಯ ಕತೆ ಇದು

ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಅಲೆಕ್ಸ್ ಉತ್ತಮ ಕರಾಟೆಪಟು. ಇವರ ೪೦ ನೇ ವಯಸ್ಸಿನಲ್ಲಿ ಮತಿಭ್ರಮಣೆ ಪ್ರಾರಂಭವಾಯಿತು. ಕುಟುಂಬದವರು ಕೋಣೆಯೊಳಗೆ ಕೂಡಿ ಹಾಕಿದರು. ಒಬ್ಬ ಸಾಮಾಜಿಕ ಕಾರ್ಯಕರ್ತರು ಇವರನ್ನು ಗುರುತಿಸಿ ಪಶ್ಚಿಮಕ್ಕೆ ಕರೆ ತಂದರು. ಇವರು ಸ್ಕಿಜ಼ೋಫ್ರೀನಿಯಾ ಎಂಬ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆಗಳೊಂದಿಗೆ ವಿಶೇಷ ಕಾಳಜಿ ವಹಿಸಲಾಯಿತು. ಈಗ ಸಂಸ್ಥೆಯ ದ್ವಾರಪಾಲಕರಾಗಿದ್ದು, ಹಾಲು, ದಿನಪತ್ರಿಕೆಗಳನ್ನು ಸಮೀಪದ ಅಂಗಡಿಯಿಂದ ತರುವ ಜವಾಬ್ದಾರಿ ಇವರದ್ದು. ಇಂತಹ ಅನೇಕ ನಿರಾಶ್ರಿತರು, ಕುಟುಂಬ ಇದ್ದೂ ಇಲ್ಲದಂತಾದವರು, ದಿವ್ಯಾಂಗರು, […]