ತಪೋವನದಲ್ಲಿ ‘ಪರಂಪರಾ’ ಕಲಾವೇದಿಕೆ ಮತ್ತು ತರಗತಿಗಳು ಪ್ರಾರಂಭ

ಮಣಿಪಾಲ: ತಪೋವನ ಇದು ಭಾರತೀಯ ಕಲಾ ಪ್ರಕಾರಗಳ ಕೇಂದ್ರವಾಗಿದ್ದು ವಿವಿಧ ತರಹದ ಲಲಿತ ಕಲೆಗಳಿಗೆ ‘ಪರಂಪರಾ’ ಎಂಬ ಕಲಾವೇದಿಕೆಯನ್ನು ಪ್ರಾರಂಭಿಸಲಿದೆ. ಇದು ಕಲೆ, ಕಲಾವಿದರು ಮತ್ತು ಕಲಾರಾಧಕರು ಪರಸ್ಪರ ಕೈ ಜೋಡಿಸುವ ವೇದಿಕೆಯಾಗಿದೆ. ಪ್ರಸ್ತುತ ತಪೋವನದ ಧ್ಯೇಯವೆಂದರೆ ಲಲಿತಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ತರುವುದಾಗಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ, ರಂಗಭೂಮಿ ಮತ್ತು ಅರ್ಥ ಸಹಿತ ಭಗವದ್ಗೀತೆಯ 18 ಅಧ್ಯಾಯಗಳ ಪಠಣ ಮುಂತಾದವುಗಳು ಪರಂಪರಾದಲ್ಲಿರಲಿದೆ. ಕಲಿಕೆಗೆ ವಯಸ್ಸಿನ ಹಂಗಿಲ್ಲವಾದ್ದರಿಂದ ಕಲಿಯುವ ಆಸಕ್ತಿ ಇರುವ ಯಾರು ಬೇಕಾದರೂ […]