ಕುಂದಾಪುರ: ಬೋನಿಗೆ ಬಿತ್ತು ಹೆಣ್ಣು ಚಿರತೆ

ಕುಂದಾಪುರ : ಇಲ್ಲಿಗೆ ಸಮೀಪದ ತೆಕ್ಕಟ್ಟೆಯ ಮಾಲಾಡಿ ಎಂಬಲ್ಲಿನ ಖಾಸಗಿ ಮಾವಿನ ತೋಟದಲ್ಲಿ ಗುರುವಾರ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ಭಾರಿ ಗಾತ್ರದ ಹೆಣ್ಣು ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪರಿಸರದಲ್ಲಿ ಚಿರತೆ ಕಾಣಿಸುತ್ತಿದೆ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೋನನ್ನು ಇರಿಸಿ ಅದರಲ್ಲಿ ನಾಯಿಯನ್ನು ಕಟ್ಟಿ ಹಾಕಿ ಚಿರತೆಯನ್ನು ಬೋನಿನಲ್ಲಿ ಬಂಧಿಸುವ ಕಾರ್ಯತಂತ್ರ ರೂಪಿಸಿದ್ದರು. ಸ್ಥಳೀಯರ ಸಹಕಾರದಿಂದ ನಡೆಯುತ್ತಿದ್ದ ಆಪರೇಶನ್‌ ಚಿತಾ ಕಾರ್ಯಚರಣೆ ಬುಧವಾರ ತಡ ರಾತ್ರಿ ಯಶಸ್ವಿಯಾಗಿತ್ತು. […]