ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಕೃತಿ ಬಿಡುಗಡೆ: ಬದುಕಿನ ಒತ್ತಡದಿಂದ ಹೊರಬರಲು ಸಾಹಿತ್ಯದ ಓದು ಅವಶ್ಯಕ: ಜ್ಯೋತಿ ಮಹಾದೇವ್

ಉಡುಪಿ: ಸಾಹಿತ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಿದೆ ಎಂದು ಲೇಖಕಿ, ಹಿಪ್ನೋ ಥೆರಪಿಸ್ಟ್ ಜ್ಯೋತಿ ಮಹಾದೇವ್  ಹೇಳಿದರು. ಅವರು ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆದ ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಹಾಗೂ ‘ದೂರಾಗೊ ಮುನ್ನ’ ಕಥಾ ಸಂಕಲನಗಳನ್ನು ಅನಾವರಣಗೊಳಿಸಿ ಮಾತನಾಡಿದರು. ತಾನು ಕಂಡುಕೊಂಡ ವಿಚಾರಗಳನ್ನು ಇತರರಿಗೆ ಹೇಳಬೇಕು ಎನ್ನುವ ತುಡಿತ ಮಾತು ಹುಟ್ಟುವ ಮೊದಲೇ ಮಾನವನಲ್ಲಿ ಇತ್ತು, ಬರವಣಿಗೆ ಬೆಳೆದಂತೆ ಸಾಹಿತ್ಯ ಮುದ್ರಿತ ರೂಪವನ್ನು ಪಡೆದುಕೊಂಡಿತು. 21 ನೇ […]