ಮಾ.3: ಮಲ್ಪೆ ಕಡಲ ಕಿನಾರೆಯಲ್ಲಿ ಪಾಂಚಜನ್ಯ ಸಮಾವೇಶ
ಉಡುಪಿ: ನಮೋ ಭಾರತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಪಾಂಚಜನ್ಯ’ ಬೃಹತ್ ಸಮಾವೇಶ ಮಲ್ಪೆ ಕಡಲ ತೀರದಲ್ಲಿ ಇಂದು ನಡೆಯಲಿದೆ ಎಂದು ನಮೋಭಾರತ್ ಉಡುಪಿ ಸಂಚಾಲಕ ಶಶಾಂಕ್ ಶಿವತ್ತಾಯ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 20 ಸಾವಿರ ಜನರು ಬರುವ ನಿರೀಕ್ಷೆ ಇದೆ. ಸಮಾವೇಶದ ಅಂಗವಾಗಿ ಸಂಜೆ 4ಗಂಟೆಗೆ ವಡಾಬಾಂಡೇಶ್ವರದವರೆಗೆ ಮೋದಿ ಅಭಿಮಾನಿಗಳಿಂದ ವಾಹನ ಜಾಥಾ ಜರುಗಲಿದೆ. ಬಳಿಕ ಸ್ವರಭಾರತಿ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ […]