ದೇಶದ ಆರಾಧ್ಯ ದೇವರನ್ನು ಎಬ್ಬಿಸುವ ಉತ್ತಮ ತೀರ್ಪು: ಪಲಿಮಾರು ಶ್ರೀ

ಉಡುಪಿ: ಉತ್ಥಾನ ದ್ವಾದಶಿಯ ಪರ್ವ ಕಾಲದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟು, ದೇಶದ ಆರಾಧ್ಯ ದೇವರನ್ನು ಎಬ್ಬಿಸುವಂತಹ ಉತ್ತಮ ತೀರ್ಪಿನ ನ್ಯಾಯ ನೀಡಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ. ನ್ಯಾಯಾಲಯದ ಮೇಲಿಟ್ಟ ನಿರೀಕ್ಷೆ, ಭರವಸೆ ಈಡೇರಿದೆ, ನ್ಯಾಯ ಸಿಕ್ಕಿದೆ. ನ್ಯಾಯಾಧೀಶರೂ ಅಭಿನಂದನೀಯರು. ಹಿಂದೂಗಳ ಪರ ನ್ಯಾಯಕ್ಕೆ ಹಿಂದೆ ಮುಂದೆ ನೋಡದೆ, ಸಂಕೋಚವಿಲ್ಲದೆ ದಿಟ್ಟ ತೀರ್ಮಾನ ಕೈಗೊಂಡಿದ್ದಾರೆ. ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದುಗೊಳಿಸಲು ಭೂಮಿಕೆ ಸಿದ್ಧಪಡಿಸಿದಂತೆ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದ […]