ಏಷ್ಯಾಕಪ್ 2023: ಟಾಸ್ ಗೆದ್ದ ಭಾರತ; ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ

2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ ಟಾಸ್ ಗೆದ್ದಿದ್ದು ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. 4 ವರ್ಷಗಳ ಬಳಿಕ ಇತ್ತಂಡಗಳು ಏಕದಿನ ಕ್ರಿಕೆಟ್ ನಲ್ಲಿ ಮುಖಾಮುಖಿಯಾಗಿವೆ. 2019ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ತಂಡಗಳು ಎದುರುಬದುರಾಗಿದ್ದವು. ಭಾರತ ತಂಡವು ಮೂರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಭಾರತದ […]

ಭಾರತ-ಪಾಕ್ ನಿಯಂತ್ರಣ ರೇಖೆಯ ತೀತ್ವಾಲ್ ನಲ್ಲಿ ತಾಯಿ ಶಾರದಾಂಬೆಗೆ ಪ್ರಾಣ ಪ್ರತಿಷ್ಠೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ತೀತ್ವಾಲ್‌ ನಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಜೂ.5ರಂದು ಶ್ರೀ ಶಾರದಾಂಬೆ ವಿಗ್ರಹವನ್ನು ವೇದ ಮಂತ್ರ ಘೋಷಗಳೊಂದಿಗೆ ವಿಧಿವತ್ತಾಗಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದರು. ಕಳೆದ ಮಾ.22ರಂದು ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಕೊಂಡೊಯ್ದ ಪಂಚಲೋಹದ ವಿಗ್ರಹವನ್ನು ಜಮ್ಮು ಮತ್ತು ಕಾಶ್ಮೀರದ ತೀತ್ವಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದರು. ಇದೀಗ ಶ್ರೀ ಶಾರದಾ ಪೀಠದ ಜಗದ್ಗುರುಗಳು ಕಾಶ್ಮೀರದ ತೀತ್ವಾಲ್ ಗೆ ತೆರಳಿ ಪೂಜೆ ಸಲ್ಲಿಸಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಭಾರತ-ಪಾಕಿಸ್ಥಾನ ನಿಯಂತ್ರಣ ರೇಖೆಯ ಕುಪ್ವಾರ […]

ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಫೈನಲ್: 2-1 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದ ಭಾರತ

ಒಮಾನ್‌ನ ಸಲಾಲಾದಲ್ಲಿ ಗುರುವಾರ ನಡೆದ ಪುರುಷರ ಜೂನಿಯರ್ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಭಾರತೀಯ ಹಾಕಿ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದೆ. ಸಲಾಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಹಸ್ರಾರು ಪ್ರೇಕ್ಷಕರ ಮುಂದೆ ಆಡಿದ ಎರಡೂ ತಂಡಗಳು ಆರಂಭದಿಂದಲೂ ಒಬ್ಬರಿಗೊಬ್ಬರು ಸಮಬಲದ ಪೈಪೋಟಿ ನೀಡಿದ್ದರು. ಆದರೆ ಆಟದ13 ನೇ ನಿಮಿಷದಲ್ಲಿ ಅಂಗದ್ ಬೀರ್ ಸಿಂಗ್ ಅವರ ಸ್ಟ್ರೈಕ್ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯಕವಾಯಿತು. ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ 2023 […]

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆಯಿಂದ ಭೂಕಬಳಿಕೆ: ಸ್ಥಳೀಯರಿಂದ ಸೇನೆ ವಿರುದ್ದ ಪ್ರತಿಭಟನೆ

ಇಸ್ಲಾಮಾಬಾದ್: ಇಲ್ಲಿನ ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್‌ನ ಸಂಪನ್ಮೂಲ-ಸಮೃದ್ಧ ಪ್ರದೇಶಗಳನ್ನು ಪಾಕ್ ಸರ್ಕಾರ ಮತ್ತು ಸೇನೆಯು ಅತಿಕ್ರಮಿಸುತ್ತಿರುವ ವಿರುದ್ದ ಇಲ್ಲಿನ ಸ್ಥಳೀಯ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಸರ್ಕಾರದ ಶೋಷಕ ನೀತಿಗಳ ವಿರುದ್ಧ ಪಿಒಕೆ ಭಾಗವಾಗಿರುವ ಈ ಪ್ರದೇಶದಲ್ಲಿ ವ್ಯಾಪಕ ಕೋಪ ಮತ್ತು ಅಸಮಾಧಾನವಿದೆ. ಮಾಧ್ಯಮ ವರದಿಗಳ ಪ್ರಕಾರ, ಗಿಲ್ಗಿಟ್ ಬಾಲ್ಟಿಸ್ತಾನದ ಸ್ಥಳೀಯರು ಪಾಕಿಸ್ತಾನದ ಸೇನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ ಅಥವಾ ಪಾಕಿಸ್ತಾನ್ ರೇಂಜರ್‌ಗಳು, ಅರೆಸೈನಿಕ ಪಡೆಗಳು ತಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು  ಅನುಮತಿಸುವುದಿಲ್ಲ […]

ದೀಪಾವಳಿ ಹಬ್ಬಕ್ಕೆ ಭಾರತ ಕ್ರಿಕೆಟ್ ತಂಡದ ಉಡುಗೊರೆ: ವಿರಾಟ್ ರೂಪ ತೋರಿದ ಕೊಹ್ಲಿ; ಸೋತ ಪಾಕ್

ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12ರ ಪಂದ್ಯದಲ್ಲಿ ಭಾರತವು (160/6) ಪಾಕಿಸ್ತಾನವನ್ನು (159/8) 4 ವಿಕೆಟ್‌ಗಳಿಂದ ಸೋಲಿಸಿದೆ. ವಿರಾಟ್ ಕೊಹ್ಲಿ ತಮ್ಮ ಎಂದಿನ ಸ್ಪೋಟಕ ಲಯಕ್ಕೆ ಮರಳಿದ್ದು, ಅಜೇಯ 82 ರನ್ ಗಳಿಸಿದ್ದಾರೆ.  ಪಂದ್ಯ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಸುರಿಮಳೆಯೆ ಹರಿದು ಬರುತ್ತಿದೆ. ವಿರಾಟ್ ಕೊಹ್ಲಿ ಅವರು 54 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಭಾರತ ತಂಡಕ್ಕೆ ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ್ದಾರೆ. ಮೊದಲ ಏಳು ಓವರ್‌ಗಳಲ್ಲಿ ಅಗ್ರ ನಾಲ್ಕು ಆಟಗಾರರನ್ನು ಕಳೆದುಕೊಂಡರೂ […]