ಸಂಗೀತ ಪ್ರಿಯ ಉಡುಪಿ ಶ್ರೀಕೃಷ್ಣನ ಕತೆ ಹೇಳಿದ್ದಾರೆ ಪಿ.ಲಾತವ್ಯ ಆಚಾರ್ಯ

»ಪಿ.ಲಾತವ್ಯ ಆಚಾರ್ಯ ಉಡುಪಿ. 15ನೇ ಶತಮಾನದಲ್ಲಿ ದಾಸಸಾಹಿತ್ಯದ ಕ್ರಾಂತಿಗೆ ಶ್ರೀಕೃಷ್ಣನ ಉಡುಪಿ ಕ್ಷೇತ್ರವೇ ತವರೂರಾಯಿತು ಶ್ರೀವ್ಯಾಸರಾಜರು, ಶ್ರೀವಾದಿರಾಜರು. ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯೀಂದ್ರರ ನೇತೃತ್ವದಲ್ಲಿ ನೂರಾರು ಕೃತಿಗಳು ಉಡುಪಿಯಲ್ಲಿ ಅನಾವರಣಗೊಂಡಿತು. ಉಡುಪಿ ಶ್ರೀಕೃಷ್ಣ ನ ಕುರಿತಾಗಿಯೇ ಅಸಂಖ್ಯ ಗದ್ಯ ಪದ್ಯಗಳು ರಚಿತವಾಯಿತು. ತಂಬೂರಿ ಮೀಟಿ,ಗೆಜ್ಜೆ ಕಟ್ಟಿ, ಶುದ್ಧಭಕ್ತಿ,ಮುಗ್ಧ ಹೃದಯದಿಂದ ಭಜಿಸಿ ನಲಿದ ಸಂತರಿಗೆ ಉಡುಪಿಯು ಸಾಕ್ಷಾತ್ಕಾರದ ನೆಲೆಯಾಯಿತು. ಕನಕದಾಸರ ಅಂತರಾಳದ ಕೂಗಿಗೆ ಕಡೆಗೋಲಕೃಷ್ಣ ದರುಶನವನ್ನು ಕರುಣಿಸಿದ. ದಾಸಸಾಹಿತ್ಯದ ಸ್ವಣ೯ಯುಗವೆಂದೇ ಬಿಂಬಿತವಾದ ಈ ಪವ೯ಕಾಲದಲ್ಲಿ ಸಮಸ್ತ ಉಡುಪಿಯು ಸಂಗೀತಮಯವಾಯಿತು. ಹೌದು […]