ಕುಂದಾಪುರದಲ್ಲಿ ಸದ್ಯದಲ್ಲೇ ಆಮ್ಲಜನಕ ಘಟಕ ನಿರ್ಮಾಣ

ಕುಂದಾಪುರ: ಆಮ್ಲಜನಕ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ದೇಶದ ಇತರ 9 ಸ್ಥಳಗಳಲ್ಲಿ ಆಮ್ಲಜನಕ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್) ತಿಳಿಸಿದೆ. ಪ್ರೆಷರ್ ಸ್ವಿಂಗ್ ಅಡ್ಸಾರ್ಬ್ ಷನ್ (ಪಿಎಸ್‍ಎ) ವೈದ್ಯಕೀಯ ಆಮ್ಲಜನಕ ಸ್ಥಾವರ ನಿರ್ಮಾಣದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಘಟಕಕ್ಕೆ ಜಮೀನು ಗುರುತಿಸಲಾಗಿದೆ. ಜೂನ್ ಅಂತ್ಯ ಇಲ್ಲವೇ ಜುಲೈನಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ ಈ ಘಟಕ ಪ್ರತಿ ನಿಮಿಷಕ್ಕೆ 500 ಲೀಟರ್ […]