ಲಾಕ್ ಡೌನ್ ವಿಶೇಷ ಪ್ಯಾಕೇಜ್ ಘೋಷಣೆ: ಹೋಟೆಲ್ ನೌಕರರು, ಮಾಲೀಕರಿಗೆ ಅನ್ಯಾಯ; ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ಕೋವಿಡ್ ಎರಡನೇ ಅಲೆಯಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಮಾಲೀಕರು ಹಾಗೂ ನೌಕರರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಈ ಸಂಕಷ್ಟದ ಮಧ್ಯೆಯೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ನಲ್ಲಿ ಹೋಟೆಲ್ ನೌಕರರು, ಮಾಲೀಕರನ್ನು ಪರಿಗಣಿಸದೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಹೋಟೆಲ್, ಸಣ್ಣ ಕ್ಯಾಂಟೀನ್, ಗೂಡಾಂಗಡಿ ಹಾಗೂ ರೆಸ್ಟೋರೆಂಟ್‌ಗಳಿಗೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮ ಮುಂದುವರಿಸಿಕೊಂಡು ಹೋಗುವುದು ಬಹುದೊಡ್ಡ ಸವಾಲಾಗಿದೆ. ಬ್ಯಾಂಕುಗಳ […]