ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ: ನಾಳೆ (ಅ.16) ನುಡಿನಮನ ಕಾರ್ಯಕ್ರಮ

ಉಡುಪಿ: ಕೇಂದ್ರದ ಮಾಜಿ ಸಚಿವರು, ರಾಜ್ಯಸಭಾ ಸದಸ್ಯರಾಗಿರುವ ದಿ. ಓಸ್ಕರ್ ಫೆರ್ನಾಂಡಿಸ್ ಸ್ಮರಣಾರ್ಥ ಅಕ್ಟೋಬರ್ 16ರಂದು (ನಾಳೆ) ಶನಿವಾರ ಸಂಜೆ 5.30ಕ್ಕೆ ‘ನುಡಿನಮನ’ ಕಾರ್ಯಕ್ರಮ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ನಡೆಯಲಿದೆ. ಓಸ್ಕರ್ ಫೆರ್ನಾಂಡಿಸ್ ದಿವಂಗತರಾಗಿ ಒಂದು ತಿಂಗಳು ಪೂರ್ಣಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಸಂಜೆ 3.30ಕ್ಕೆ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದಲ್ಲಿ ಪವಿತ್ರ ಪೂಜೆ ನಡೆಯಲಿದೆ. 3 ಗಂಟೆಗೆ ಝೇವಿಯರ್ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, 5.30ಕ್ಕೆ ನುಡಿನಮನ ಕಾರ್ಯಕ್ರಮ ದೇವಾಲಯದ ವಠಾರದಲ್ಲಿ ಜರಗಲಿದೆ. […]